ಪೊಲೀಸ್ ವಾಹನದಲ್ಲಿ ಎಣ್ಣೆ ಪಾರ್ಟಿ ಇಬ್ಬರು ಪೇದೆಗಳ ಅಮಾನತ್ತು ಮಾಡಿದ ಬೆಳಗಾವಿ ಎಸ್ಪಿ.. ಬೆಳಗಾವಿ : ಪೋಲಿಸ್ ಇಲಾಖೆಯ 112 ವಾಹನದಲ್ಲಿ ಕರ್ತವ್ಯ ವೇಳೆ ಎ...
ಪೊಲೀಸ್ ವಾಹನದಲ್ಲಿ ಎಣ್ಣೆ ಪಾರ್ಟಿ ಇಬ್ಬರು ಪೇದೆಗಳ ಅಮಾನತ್ತು ಮಾಡಿದ ಬೆಳಗಾವಿ ಎಸ್ಪಿ..
ಬೆಳಗಾವಿ : ಪೋಲಿಸ್ ಇಲಾಖೆಯ 112 ವಾಹನದಲ್ಲಿ
ಕರ್ತವ್ಯ ವೇಳೆ ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.
ಚಿಕ್ಕೋಡಿ ತಾಲ್ಲೂಕಿನ ನಾಗರಾಳ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದ್ದು, 112 ಪೆಟ್ರೋಲಿಂಗ್ ವಾಹನದಲ್ಲಿ ಎಣ್ಣೆ, ಮಾಂಸದೂಟ ಮಾಡಿದ್ದ ಸಿಬ್ಬಂದಿಗಳಾದ ಎಚ್.ಎಮ್.ಕಮತೆ ಮತ್ತು ದುಮಾಳ ಅವರನ್ನು ಎಸ್ಪಿ ಅಮಾನತ್ತು ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ. ಭೀಮಾಶಂಕರ ಗುಳೇದ ಅವರು, ಖಡಕಲಾಟ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ಊಟ ಮಾಡುವ ನೆಪದಲ್ಲಿ ಸಾರಾಯಿ ಸೇವನೆ ಮಾಡಿರುವುದು ನನ್ನ ಬಗ್ಗೆ ಗಮನಕ್ಕೆ ಬಂದ ತಕ್ಷಣ ಶಿಸ್ತು ಕ್ರಮಕ್ಕೆ ಅದೇಶ ಮಾಡಿದ್ದೇನೆ. ಆ ಬಳಿಕ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಿದ್ದೇನೆ ಎಂದರು.
ಅಷ್ಟೇ ಅಲ್ಲದೇ ಇಬ್ಬರು ಪೊಲೀಸ್ ಸಿಬ್ಬಂದಿಗಳ ಮೇಲೆ ನಿಗಾ ಇಡಲು ವಿಫಲವಾಗಿದ್ದರಿಂದ ಚಿಕ್ಕೋಡಿ ಮತ್ತು ಖಡಕಲಾಟ್ ಎರಡು ಠಾಣೆ ಪಿಎಸ್ಐಗೆ ಶೋಕಾಸ ನೋಟಿಸ್ ನೀಡಿದ್ದೇನೆ. ಚಿಕ್ಕೋಡಿ ಡಿಎಸ್ ಪಿಗೂ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಅದೇಶಿಸಿದ್ದೇನೆ ಎಂದರು.