ಅಥಣಿ ನಗರದಲ್ಲಿ ಸೇವೆ ಸಲ್ಲಿಸಿದ್ದ PSI ಕುಮಾರ್ ಹಾಡಕರ ಅವರಿಗೆ CPI ಹುದ್ದೆಗೆ ಪದೋನ್ನತಿ ದೊರೆತ ಹಿನ್ನೆಲೆಯಲ್ಲಿ ಬಿಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾ...
ಅಥಣಿ ನಗರದಲ್ಲಿ ಸೇವೆ ಸಲ್ಲಿಸಿದ್ದ PSI ಕುಮಾರ್ ಹಾಡಕರ ಅವರಿಗೆ CPI ಹುದ್ದೆಗೆ ಪದೋನ್ನತಿ ದೊರೆತ ಹಿನ್ನೆಲೆಯಲ್ಲಿ ಬಿಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಅಥಣಿ ಪೊಲೀಸ್ ಠಾಣೆಯಲ್ಲಿ PSI ಆಗಿ ಕರ್ತವ್ಯ ನಿರ್ವಹಿಸಿದ್ದ ಕುಮಾರ್ ಹಡಕರ್ ಅವರು ತಮ್ಮ ಸೇವಾ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಮಾಣಿಕತೆ, ಶಿಸ್ತು ಹಾಗೂ ಜನಸಾಮಾನ್ಯರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ಜನಪ್ರಿಯರಾಗಿದ್ದರು. ಅವರ ನಿಷ್ಠಾವಂತ ಸೇವೆಯನ್ನು ಗುರುತಿಸಿದ ಪೊಲೀಸ್ ಇಲಾಖೆ, ಅವರಿಗೆ CPI ಹುದ್ದೆಗೆ ಪದೋನ್ನತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಆಯೋಜಿಸಲಾದ ಬಿಳ್ಕೊಡುಗೆ ಸಮಾರಂಭದಲ್ಲಿ ಮಾನ್ಯ DYSP ಪ್ರಶಾಂತ ಮುನ್ನೊಳ್ಳಿ, CPI ಸಂತೋಷ ಹಳ್ಳೂರ PSI ಉಪ್ಪಾರ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ, ಸಹೋದ್ಯೋಗಿಗಳು, PSI ಕುಮಾರ್ ಹಡಕರ್ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗಣ್ಯರು ಮಾತನಾಡಿ, “ಕಠಿಣ ಪರಿಶ್ರಮ, ಶಿಸ್ತು ಹಾಗೂ ನಿಷ್ಠೆಯ ಸೇವೆಗೆ ದೊರೆತ ಇದು ತಕ್ಕ ಗೌರವ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪದೋನ್ನತಿ ಪಡೆದ ಬಳಿಕ ಮಾತನಾಡಿದ CPI ಕುಮಾರ್ ಹಡಕರ್ ಅವರು, “ಇಲ್ಲಿಯವರೆಗೆ ನನಗೆ ಸಹಕಾರ ನೀಡಿದ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದಿನ ದಿನಗಳಲ್ಲೂ ಇನ್ನಷ್ಟು ಜವಾಬ್ದಾರಿಯಿಂದ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ” ಎಂದು ಹೇಳಿದರು.
ಸಭೆಯ ಅಂತ್ಯದಲ್ಲಿ PSI ಹುದ್ದೆಯಿಂದ CPI ಹುದ್ದೆಗೆ ಪದೋನ್ನತಿ ಪಡೆದಿರುವುದಕ್ಕೆ ಹಾಜರಿದ್ದವರು ತಮ್ಮ ತಮ್ಮ ಅನಿಸಿಕೆಗಳು ಹಾಗೂ ಶುಭಾಶಯಗಳನ್ನು ಹಂಚಿಕೊಂಡು, ಸಮಾರಂಭವನ್ನು ಸೌಹಾರ್ದತೆಯಿಂದ ಮುಕ್ತಾಯಗೊಳಿಸಿದರು.
ಅಲ್ಲಾವುದ್ದೀನ್ ಶೇಖ
ನ್ಯೂಸ್ ಪ್ರೈಮ್ ಕನ್ನಡ

