ಅಥಣಿಯಲ್ಲಿ ಜೂಜಾಟದ ಮೇಲೆ ಪೊಲೀಸ್ ದಾಳಿ ₹10,500 ನಗದು, 5 ಮೊಬೈಲ್ ಹಾಗೂ 5 ಬೈಕ್ ಜಪ್ತಿ – 7 ಮಂದಿ ಬಂಧನ ಅಥಣಿ ಹದ್ದಿಯ ಕಾಡಸಿದ್ದೇಶ್ವರ ಆಶ್ರಮ ಸಮೀಪದ ಹ...
ಅಥಣಿಯಲ್ಲಿ ಜೂಜಾಟದ ಮೇಲೆ ಪೊಲೀಸ್ ದಾಳಿ
₹10,500 ನಗದು, 5 ಮೊಬೈಲ್ ಹಾಗೂ 5 ಬೈಕ್ ಜಪ್ತಿ – 7 ಮಂದಿ ಬಂಧನ
ಅಥಣಿ ಹದ್ದಿಯ ಕಾಡಸಿದ್ದೇಶ್ವರ ಆಶ್ರಮ ಸಮೀಪದ ಹಳೆ ತಂಗಡಿ–ಸಿನ್ನಾಳ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 7 ಮಂದಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 01-02-2026 ರಂದು ಸಂಜೆ 4.30 ಗಂಟೆಗೆ, ಹುಣಸೆ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟ ಎಲೆಗಳ ಮೇಲೆ “ಅಂದರ–ಬಾಹರ” ಜೂಜಾಟ ಆಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿತರಿಂದ:
₹10,500 ನಗದು ಹಣ,
ವಿವಿಧ ಕಂಪನಿಯ 5 ಮೊಬೈಲ್ ಫೋನ್,
5 ಮೋಟಾರ್ ಸೈಕಲ್ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿತರ ವಿವರ:
ಮಹಾನಿಂಗ ರಾಮಪ್ಪ ಮಾಸ್ತ – ಗವಿಸಿದ್ದನಮಡ್ಡಿ, ಅಥಣಿ
ಶಶಿಕಾಂತ ಹರೀಬಾ ಕಾಂಬಳೆ – ಮದ್ದಿನಮಡ್ಡಿ, ಅಥಣಿ
ಆಸೀಪ ಅಸ್ಟಾಕಹುಸೇನ ದೇಸಾಯಿ – ವಿದ್ಯಾನಗರ, ಅಥಣಿ
ರವಿ ಶೇಖರ ಕುಂಬಾರ – ಕುಂಬಾರಗಲ್ಲಿ, ಅಥಣಿ
ನೀಸಾರ ಮಹ್ಮದ ಡಾಂಗೆ – ಹಿಪ್ಪರಗಿ ಗಲ್ಲಿ, ಅಥಣಿ
ಅಯಾಜ ಹಸನಸಾಬ ಫಕಾಲಿ – ನಾಲಬಂದ ಗಲ್ಲಿ, ಅಥಣಿ
ಪ್ರವೀಣ ರಾಚಪ್ಪ ಗೌಡಪ್ಪನವರ – ಶೇಗುಣಸಿ
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 85/2026 ಅಡಿಯಲ್ಲಿ
ಕಲಂ 87 ಕೆ.ಪಿ. ಆಕ್ಟ್ ಹಾಗೂ 112 ಬಿಎನ್‌ಎಸ್ ಆಕ್ಟ್–2023 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಜೂಜಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಥಣಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

