ರೈತರ ಹೋರಾಟದ ಹಿನ್ನೆಲೆ – ನಾಳೆ ಬೆಳಗ್ಗೆ 11ಕ್ಕೆ ಖಾರ್ಖಾನೆ ಮಾಲೀಕರ ಸಭೆ ಕರೆದ ಸಿಎಂ ಸಿದ್ದರಾಮಯ್ಯ ಕಬ್ಬು ಬೆಲೆ ವಿವಾದ ಪರಿಹಾರಕ್ಕೆ ಸರ್ಕಾರ ಚಟುವಟಿಕೆ...
ರೈತರ ಹೋರಾಟದ ಹಿನ್ನೆಲೆ – ನಾಳೆ ಬೆಳಗ್ಗೆ 11ಕ್ಕೆ ಖಾರ್ಖಾನೆ ಮಾಲೀಕರ ಸಭೆ ಕರೆದ ಸಿಎಂ ಸಿದ್ದರಾಮಯ್ಯ
ಕಬ್ಬು ಬೆಲೆ ವಿವಾದ ಪರಿಹಾರಕ್ಕೆ ಸರ್ಕಾರ ಚಟುವಟಿಕೆ ಆರಂಭ
ಬೆಂಗಳೂರು, ನ. 6:
ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ಕರೆದಿದ್ದಾರೆ.
ನಾಳೆ (ಶುಕ್ರವಾರ) ಬೆಳಗ್ಗೆ 11 ಗಂಟೆಗೆ ವಿದಾನಸೌಧದಲ್ಲಿ ಖಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಯಲಿದೆ. ಕಬ್ಬಿನ ಖರೀದಿ ಬೆಲೆ ಕುರಿತಾಗಿ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ಮಧ್ಯೆ ನಡೆಯುತ್ತಿರುವ ಅಸಮ್ಮತಿ ನಿವಾರಣೆ, ರೈತರ ಬೇಡಿಕೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸರ್ಕಾರ ಬೆಳೆಗಾರರಿಗೆ ಕನಿಷ್ಠ ರೂ. 3400 ಕ್ವಿಂಟಾಲ್ ಬೆಲೆ ನೀಡಬೇಕೆಂಬ ಒತ್ತಡ ಎದುರಿಸುತ್ತಿರುವ ಸಂದರ್ಭದಲ್ಲಿ, ಈ ಸಭೆ ಮಹತ್ವ ಪಡೆದುಕೊಂಡಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳೆಗಾರರು ಹೋರಾಟ ತೀವ್ರಗೊಳಿಸಿದ್ದು, ನಾಳೆಯಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಮಾತುಕತೆ ಯಶಸ್ವಿಯಾಗದಿದ್ದರೆ, ಹೋರಾಟ ಉಗ್ರ ಸ್ವರೂಪ ಪಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ಸಭೆ ರಾಜ್ಯದಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.
ಅಲ್ಲಾವುದ್ದೀನ್ ಶೇಖ
ನ್ಯೂಸ್ ಪ್ರೈಮ್ ಕನ್ನಡ

