ಬಳ್ಳಿಗೇರಿಯಲ್ಲಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ಭೇದಿಸಿದ ಪೊಲೀಸರು – ಇಬ್ಬರು ಆರೋಪಿತರ ಬಂಧನ! ಪ್ರಶಾಂತ ಹೋಟೆಲ್ & ಲಾಡ್ಜ್ ಮೇಲೆ ದಾಳಿ; ಮಹಿಳೆ ರಕ್...
ಬಳ್ಳಿಗೇರಿಯಲ್ಲಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ಭೇದಿಸಿದ ಪೊಲೀಸರು – ಇಬ್ಬರು ಆರೋಪಿತರ ಬಂಧನ!
ಪ್ರಶಾಂತ ಹೋಟೆಲ್ & ಲಾಡ್ಜ್ ಮೇಲೆ ದಾಳಿ; ಮಹಿಳೆ ರಕ್ಷಣೆ
ಅಥಣಿ: ತಾಲೂಕಿನಲ್ಲಿ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ಪ್ರಕರಣವನ್ನು ಅಥಣಿ ಪೊಲೀಸರು ಭೇದಿಸಿ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.
ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಈ ಕಾರ್ಯಾಚರಣೆ ನಡೆಸಿದರು.
ತಾಲೂಕಿನ ಬಳ್ಳಿಗೇರಿ ಗ್ರಾಮದ ವ್ಯಾಪ್ತಿಯಲ್ಲಿರುವ ಪ್ರಶಾಂತ ಹೋಟೆಲ್ ಮತ್ತು ಲಾಡ್ಜ್‌ನಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಪತ್ತೆಯಾಯಿತು. ಈ ಸಂಬಂಧ ಲಾಡ್ಜ್ ಮಾಲೀಕ ಸಂದಾರ್ ಭಗವಂತ ಕಾಂಬಳೆ ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಪ್ರವೀಣ್ ಮಲ್ಲಾರಿ ಎಂಬಾತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ ಮಹಿಳೆಯನ್ನು ರಕ್ಷಿಸಲಾಗಿದ್ದು, ಆರೋಪಿಗಳ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ Immoral Traffic (Prevention) Act 1956ರ ಕಲಂ 3, 4 ಮತ್ತು 5ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

