ಗೃಹಲಕ್ಷ್ಮೀ 3ನೇ ಕಂತಿನ ಹಣ ಈ ದಿನಾಂಕದೊಳಗೆ ಜಮೆ | Gruhalakshmi Scheme Amount Credit Date.. ಎಲ್ಲರಿಗೂ ನಮಸ್ಕಾರ.. ಸರ್ಕಾರದ ಮಹತ್ವಾಕಾಂಕ್ಷೆಯ ಗ...
ಗೃಹಲಕ್ಷ್ಮೀ 3ನೇ ಕಂತಿನ ಹಣ
ಈ ದಿನಾಂಕದೊಳಗೆ ಜಮೆ |
Gruhalakshmi Scheme
Amount Credit Date..
ಎಲ್ಲರಿಗೂ ನಮಸ್ಕಾರ.. ಸರ್ಕಾರದ
ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ
ಯೋಜನೆಯ 3ನೇ ಕಂತಿನ ಹಣ
(Gruhalakshmi Scheme Amount
Credit Date) ಮತ್ತು ಇನ್ನೂ ಮುಂದಿನ
ಎಲ್ಲ ಕಂತಿನ ಹಣವನ್ನು ಒಂದು ನಿಗದಿತ
ದಿನಾಂಕದೊಳಗೆ ಮನೆ ಯಜಮಾನಿಯರ
ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು
ಸರ್ಕಾರ ಮುಂದಾಗಿದೆ.
ತಾಂತ್ರಿಕ ಕಾರಣದಿಂದಾಗಿ ಗೃಹಲಕ್ಷ್ಮಿ
ಯೋಜನೆಯ 2ನೇ ಕಂತಿನ ದುಡ್ಡು
ವರ್ಗಾವಣೆ ಮಾಡಲು ತಡವಾಗಿತ್ತು.
ಸೆಪ್ಟೆಂಬರ್ ತಿಂಗಳ ಹಣವನ್ನು ಅಕ್ಟೋಬರ್
ಕೊನೆಯ ವಾರದಲ್ಲಿ ಹಂತ ಹಂತವಾಗಿ
GruhaLakshmi DBT ಮೂಲಕ
ವರ್ಗಾವಣೆ ಮಾಡಿದಾರೆ.
ಅದರಂತೆ ಅನ್ನಭಾಗ್ಯ ಯೋಜನೆಯ
ಹಣವನ್ನು ಪ್ರತಿ ತಿಂಗಳ ದಿನಾಂಕ 20
ರೊಳಗೆ ವರ್ಗಾವಣೆ ಮಾಡಲಾಗುವುದು
ಎಂದು ಸರ್ಕಾರ ತಿಳಿಸಿದೆ. ಸಾಮಾಜಿಕ
ಭದ್ರತಾ ಪಿಂಚಣಿ ಹಣವನ್ನು ದಿನಾಂಕ 5
ರೊಳಗೆ ಜಮಾ ಮಾಡಲಿದ್ದಾರೆ. ಈ ರೀತಿಯ
ಸರ್ಕಾರದ ಕ್ರಮದಿಂದಾಗಿ
ಫಲಾನುಭವಿಗಳ ಗೊಂದಲ
ಬಗೆಹರಿಯಲಿದೆ.
ಗೃಹಲಕ್ಷ್ಮೀ ಯೋಜನೆಯ 3ನೇ ಕಂತಿನ
(Gruha Lakshmi Scheme 3rd
Installment) ಮತ್ತು ಇನ್ನೂ ಮುಂದಿನ
ಎಲ್ಲ ಕಂತಿನ 2 ಸಾವಿರ ರೂಪಾಯಿ ಹಣ
ವರ್ಗಾವಣೆ ಮಾಡಲು ಹಣಕಾಸು
ಇಲಾಖೆಯಿಂದ ಹಸಿರು ನಿಶಾನೆ
ದೊರೆತಿದ್ದು ಪ್ರತಿ ತಿಂಗಳ ದಿನಾಂಕ
20 ರೊಳಗಾಗಿ ಮನೆ ಯಜಮಾನಿಯರ
ಖಾತೆಗೆ ಹಣ ಜಮಾ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಕೊಂಡಿದ್ದಾರೆ..