ಅಥಣಿ: “ನನ್ನ ತಮ್ಮ ಧರಿಸಿದ್ದ ಹುಲಿಯುಗುರು ನಕಲಿ” ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಸ್ಪಷ್ಟನೆ.. ಅಥಣಿ : ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಸು...
ಅಥಣಿ: “ನನ್ನ ತಮ್ಮ ಧರಿಸಿದ್ದ
ಹುಲಿಯುಗುರು ನಕಲಿ” ಲಕ್ಷ್ಮಣ್ ಸವದಿ
ಪುತ್ರ ಚಿದಾನಂದ ಸವದಿ ಸ್ಪಷ್ಟನೆ..
ಅಥಣಿ : ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ
ಸುಮಿತ್ ಸವದಿ ಕೊರಳಲ್ಲಿ ಹುಲಿ ಉಗುರು ಹೋಲುವ ಪೆಂಡೆಂಟ್ ಪತ್ತೆಯಾದ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಸವದಿ ಸ್ವಗೃಹಕ್ಕೆ ಅಥಣಿ ಅರಣ್ಯಾಧಿಕಾರಿ ಪ್ರಶಾಂತ್ ಗಾಣಿಗೇರ ಹಾಗೂ ತಂಡ ವಾರೆಂಟೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಪರಿಶೀಲನೆಗೆ ಸಹಕಾರ ನೀಡಿ ಅಧಿಕಾರಿಗಳಿಗೆ ಹುಲಿ ಉಗುರು ಹೋಲುವ ಪೆಂಡೆಂಟ್ ಹಸ್ತಾಂತರಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾನೂನು ಪಾಲನೆ ಎಲ್ಲರ ಕರ್ತವ್ಯ. ಅದು ಅಸಲಿ ಅಲ್ಲ ನಕಲಿ. ನಮ್ಮ ತಮ್ಮ ಸುಮಿತ್ ಗುಜರಾತ ಪ್ರವಾಸಕ್ಕೆ ಹೋಗಿದ್ದು ಪೆಂಡೆಂಟ್ ಮನೆಯಲ್ಲೇ ಇದೆ.
ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು ತನಿಖೆಯಾಗಲಿ. ಹುಲಿ ರಕ್ಷಣೆ ಎಲ್ಲರ ಕರ್ತವ್ಯ. ನಾವು ಕಾನೂನಿಗೆ ತಲೆ ಬಾಗುತ್ತೇವೆ. ಅದು ಅಸಲಿ ಅಲ್ಲ ನಕಲಿ ಎಂದು ಸ್ಪಷ್ಟನೆ
ನೀಡಿದ್ದಾರೆ.