ಎನ್ ಆರ್ ಎಲ್ ಎಮ್ ಯೋಜನೆ ದುರುಪಯೋಗ( ಕಾ ನಿ ಪ) ಧ್ವನಿ ಸಂಘಟನೆಯಿಂದ ದೂರು..!!?? 22/092025 ರಂದು ಬೆಳಗ್ಗೆ ಅಥಣಿಯ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾ...
ಎನ್ ಆರ್ ಎಲ್ ಎಮ್ ಯೋಜನೆ ದುರುಪಯೋಗ( ಕಾ ನಿ ಪ) ಧ್ವನಿ ಸಂಘಟನೆಯಿಂದ ದೂರು..!!??
22/092025 ರಂದು ಬೆಳಗ್ಗೆ ಅಥಣಿಯ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ್ ಕಲ್ಲಾಪುರ್ ಅವರಿಗೆ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘಟನೆಯಿಂದ ದೂರನ್ನು ಸಲ್ಲಿಸಲಾಯಿತು.
ದೂರ ಅನ್ವಯ ಅಥಣಿ ತಾಲೂಕಿನ ಕೆಲವು ಸ್ವಸಹಾಯ ಸಂಘಗಳು/ ಸಂಸ್ಥೆಗಳು ಅಥವಾ ಕಾರ್ಯನಿರ್ವಾಹಕರು ಎನ್ ಆರ್ ಎಲ್ ಎಮ್ (NRLM) ಯೋಜನೆ ಅಡಿಯಲ್ಲಿ ದೊರಕಿರುವ ಅನುದಾನವನ್ನು ನಿಗದಿತ ಉದ್ದೇಶಕ್ಕಾಗಿ ಬಳಸದೆ, ಅಕ್ರಮವಾಗಿ ಉಳಿಸಿಕೊಂಡು ಅಥವಾ ವೈಯಕ್ತಿಕ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಂಡಿರುವ ಸ್ಥಳೀಯ ಮಾಹಿತಿಗಳು ಮತ್ತು ಸಾಕ್ಷಿಗಳು ಲಭ್ಯವಾಗಿರುತ್ತವೆ.
ಈ ಈ ಎಲ್ಲಾ ವಿಷಯಗಳ ಬಗ್ಗೆ ಸೂಕ್ತವಾದ ತನಿಖೆ ನಡೆಸಿ, ತ್ವರಿತವಾಗಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಕಾರ್ಯನಿರ್ತ ಪತ್ರಕರ್ತ ಧ್ವನಿ ಸಂಘಟನೆಯಿಂದ ಮನವಿಯನ್ನು ಕಾರ್ಯನಿರ್ವಕ ಅಧಿಕಾರಿಗಳಿಗೆ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಅಥಣಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ್ ಕಲ್ಲಾಪುರ್ ಅವರು ಮನವಿಯನ್ನು ಸ್ವೀಕರಿಸಿ ನಾನು ತಕ್ಷಣದಿಂದಲೇ ಈ ಯೋಜನೆಯ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ತೆಗೆದುಕೊಂಡು ಅದನ್ನು ಪರಿಶೀಲನೆ ಮಾಡಿ ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಈ ಸಂಘಟನೆಯ ಸದಸ್ಯರು ಎಲ್ಲರೂ ಸೇರಿ ಮನವಿಯನ್ನು ಸಲ್ಲಿಸಿದರು.
ವರದಿ. ಬಶೀರ್ ಸೈಯದ ನ್ಯೂಸ್ ಪ್ರೈಮ್ ಕನ್ನಡ ಅಥಣಿ

