ಪೆಟ್ರೋಲ್ ಬಂಕ್ ರಿಟೇಲ್ ಔಟ್‌ಲೇಟ್ ಅಳವಡಿಸಲು ನಿರಪೇಕ್ಷಣ ಪತ್ರ [ಎನ್.ಓ.ಸಿ] ನೀಡಲು ರೂ.12,000/- ಗಳ ಲಂಚಕ್ಕೆ ಬೇಡಿಕೆ ಇಟ್ಟು ಟ್ರ್ಯಾಪ್ ಆದ ಕರ್ನಾಟಕ ...
ಪೆಟ್ರೋಲ್ ಬಂಕ್ ರಿಟೇಲ್ ಔಟ್‌ಲೇಟ್ ಅಳವಡಿಸಲು ನಿರಪೇಕ್ಷಣ ಪತ್ರ [ಎನ್.ಓ.ಸಿ] ನೀಡಲು ರೂ.12,000/- ಗಳ ಲಂಚಕ್ಕೆ ಬೇಡಿಕೆ ಇಟ್ಟು ಟ್ರ್ಯಾಪ್ ಆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,ಪ್ರಾದೇಶಿಕ ಕಛೇರಿ, ಬೆಳಗಾವಿ-02, ಚಿಕ್ಕೋಡಿ ಕೇಂದ್ರದ ಪರಿಸರ ಅಧಿಕಾರಿ ಹಾಗೂ ಡಾಟಾ ಎಂಟ್ರಿ ಆಪರೇಟರ್
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಶ್ರೀ ಸಾಗರ ಗುರಪ್ಪ ದೊಡ್ಡಮನಿಇವರಿಗೆ ಪೆಟ್ರೋಲ್ ಬಂಕ್ ರಿಟೇಲ್ ಓಟ್‌ಲೇಟ್ ಅಳವಡಿಸಲು ನಿರಪೇಕ್ಷಣ ಪತ್ರ [ಎನ್‌ಓಸಿ] ನೀಡಲುಶ್ರೀಮತಿ ಶೋಭಾ ಲಕ್ಷ್ಮಣ ಪೋಳ, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಮಂಡಳಿ, ಪ್ರಾದೇಶಿಕ ಕಛೇರಿ ಬೆಳಗಾವಿ-02, ಚಿಕ್ಕೋಡಿ ಕೇಂದ್ರ ಇವರು ಹಾಗೂ ಶ್ರೀ ಪ್ರವೀಣ ಅನಂತದೊಡಮನಿ, ಡಾಟಾ ಎಂಟ್ರಿ ಆಪರೇಟರ್, [ಹೊರಗುತ್ತಿಗೆ ಆಧಾರದ ನೌಕರ] ಕರ್ನಾಟಕ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ ಬೆಳಗಾವಿ-02, ಚಿಕ್ಕೋಡಿ ಕೇಂದ್ರ ಇವರುಗಳುರೂಪಾಯಿ 12,000/- ಗಳ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಫಿರ್ಯಾದಿ ಶ್ರೀ ಸಾಗರ ಗುರಪ್ಪದೊಡ್ಡಮನಿ, ಸಾ|| ಕುಸನಾಳ ತಾ| ಕಾಗವಾಡ ಇವರು ಆಪಾದಿತ ಅಧಿಕಾರಿ ಹಾಗೂ ಸಿಬ್ಬಂದಿಯಲಂಚದ ಬೇಡಿಕೆಗೆ ಸಂಬಂಧಪಟ್ಟಂತೆ ದಿನಾಂಕ 13/06/2025 ರಂದು ಕರ್ನಾಟಕ ಲೋಕಾಯುಕ್ತಪೊಲೀಸ್ ಠಾಣೆ ಬೆಳಗಾವಿಯಲ್ಲಿ ನೀಡಿದ ದೂರಿನ ಮೇರೆಗೆ ಶ್ರೀ ಬಿ. ಎಸ್ ಪಾಟೀಲ, ಪೊಲೀಸ್ಉಪಾಧೀಕ್ಷಕರು, ಕ.ಲೋ ಬೆಳಗಾವಿ ಇವರು ಪ್ರಕರಣ ಸಂಖ್ಯೆ 12/2025 ಕಲಂ 7(a) ಲಂಚಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ-2018) ರಡಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.ಸದರಿ ದೂರಿನ ಹಿನ್ನೆಲೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಹನುಮಂತರಾಯಐಪಿಎಸ್, ರವರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಶ್ರೀ ಬಿ. ಎಸ್ ಪಾಟೀಲ, ಡಿಎಸ್ಪಿ,ಲೋಕಾಯುಕ್ತ ಬೆಳಗಾವಿ, ಶ್ರೀಮತಿ ಅನ್ನಪೂರ್ಣ ಎಮ್. ಹುಲಗೂರ, ಪೊಲೀಸ್ ಇನ್ಸಪೆಕ್ಟರ್,ಲೋಕಾಯುಕ್ತ ಬೆಳಗಾವಿ, ಶ್ರೀ ಸಂಗಮನಾಥ ಹೊಸಮನಿ, ಪೊಲೀಸ್ ಇನ್ಸಪೆಕ್ಟರ್, ಲೋಕಾಯುಕ್ತಬೆಳಗಾವಿ, ಹಾಗೂ ಸಿಬ್ಬಂದಿಗಳಾದ ಶ್ರೀ ಮಂಜು ಕಾನಪೇಠ, ಸಿಎಚ್‌ಸಿ, ಶ್ರೀ ರವಿ ಮಾವರಕರ,ಸಿಎಚ್‌ಸಿ, ಶ್ರೀಮತಿ ರಾಜಶ್ರೀ ಬೊಸ್ಥೆ ಡಬ್ಲೂಎಚ್‌ಸಿ, ಶ್ರೀ ಗಿರೀಶ ಪಾಟೀಲ ಸಿಪಿಸಿ, ಶ್ರೀ ಲಗಮಣ್ಣಹೊಸಮನಿ, ಸಿಪಿಸಿ, ಶ್ರೀ ಸಂತೋಷ ಬೇಡಗ ಸಿಪಿಸಿ, ಶ್ರೀ ಶಶಿ ದೇವರಮನಿ, ಸಿಪಿಸಿ, ಶ್ರೀ ಅಮೋಲಕೊರವ, ಎಪಿಸಿ, ಶ್ರೀ ಕೆ. ಎಸ್ ಕಾಜಗಾರ, ಎಪಿಸಿ ವಗೈರೆ ತಂಡದವರು ದಾಳಿ ಮಾಡಿ ಆಪಾದಿತಅಧಿಕಾರಿ ಹಾಗೂ ಡಾಟಾ ಎಂಟ್ರಿ ಸಿಬ್ಬಂದಿಯನ್ನು ಲಂಚ ಪಡೆಯುವ ವೇಳೆ ಲಂಚದ ಸಮೇತಬಂಧಿಸಿರುತ್ತಾರೆ. ಹಾಗೂ ಲಂಚ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ-2018) ರ ಅಡಿಯಲ್ಲಿ ಸೂಕ್ತಕಾನೂನು ಕ್ರಮ ಜರುಗಿಸಿರುತ್ತಾರೆ.
ಅಲ್ಲಾವುದ್ದೀನ್ ಶೇಖ ಸಾರಥ್ಯದಲ್ಲಿ ನ್ಯೂಸ್ ಪ್ರೈಮ್ ಕನ್ನಡ