ಅಥಣಿ ಹುಲಗಬಾಳ: ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಹಾಗೂ ಬೈಕ್ ಮದ್ಯ ಅಪಘಾತ.. ನಿಯಂತ್ರಣ ತಪ್ಪಿ ಮಕ್ಕಳಿದ್ದ ವಾಹನ...
ಅಥಣಿ ಹುಲಗಬಾಳ: ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಹಾಗೂ ಬೈಕ್ ಮದ್ಯ ಅಪಘಾತ..
ನಿಯಂತ್ರಣ ತಪ್ಪಿ ಮಕ್ಕಳಿದ್ದ ವಾಹನ ಪಲ್ಟಿಯಾಗಿ ಹಲವು ಮಕ್ಕಳಿಗೆ ಗಾಯ, ಸ್ಥಳೀಯ ಖಾಸಗಿ ಆಸ್ಪತ್ರೆ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಅದೃಷ್ಟವಶಾತ ಯಾವುದೆ ಪ್ರಾಣ ಹಾನಿಯಾಗಿಲ್ಲ, ತಾಲೂಕಿನ ಹುಲಗಬಾಳ-ಆಕಳಕಲ್ಲು ಕ್ರಾಸ್ ಬಳಿಯಲ್ಲಿ ಘಟನೆ ನಡೆದಿದೆ. ಶಾಲಾ ವಾಹನದಲ್ಲಿ ಇದ್ದ ಮಕ್ಕಳಾದ ಶೃತಿ ಚವ್ಹಾನ, ಸಮೀಕ್ಷಾ ಚವ್ಹಾನ, ತನುಶ್ರೀ ಚವ್ಹಾನ,ತನವಿ ಚವ್ಹಾನ, ಆಯೋಷ್ ಚವ್ಹಾನ ಗಾಯಗೊಂಡ ಮಕ್ಕಳು ಎಂದು ಗುರುತಿಸಲಾಗಿದೆ. ಬೈಕ್ ಸವಾರ ಜಯಪಾಲ ತೇರದಾಳ ಅವರಿಗೂ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ತಿಳಿದು ಮಕ್ಕಳನ್ನು ದಾಖಲಿಸಿರುವ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಮಕ್ಕಳನ್ನುಯೋಗ ಕ್ಷಮೆ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.