ಬೆಳಗಾವಿ : ತೆಲೆಯ ಮೇಲೆ ಗಾಂಧಿಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ಮಾಡಿ, ಗಣೇಶ ಮೂರ್ತಿಯನ್ನು ಅತ್...
ಬೆಳಗಾವಿ : ತೆಲೆಯ ಮೇಲೆ ಗಾಂಧಿಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ಮಾಡಿ, ಗಣೇಶ ಮೂರ್ತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ದೃಶ್ಯ ಕಂಡುಬಂದಿತು..
ಇದು ಭಾರತ,ವಿವಿಧತೆಯಲ್ಲಿ ಏಕತೆ ಸಾರುವ ಅನೇಕ ಧರ್ಮೀಯರು ವಾಸ ಮಾಡುವ ಹೆಮ್ಮೆಯ ಭಾರತ ನಮ್ಮದು, ನಮ್ಮ ದೇಶದಲ್ಲಿ ಸಹೋದರತ್ವ, ಸಾಮರಸ್ಯ, ಬಾಂಧವ್ಯ ಇನ್ನುವರೆಗೆ ಜೀವಂತವಾಗಿವೆ ಹೀಗಾಗಿ ಈ ಬಾಂಧವ್ಯ ಸೂರ್ಯಚಂದ್ರ ಇರೋವರೆಗೂ ಜೀವಂತವಾಗಿರುತ್ತದೆ ಎನ್ನುವದಕ್ಕೆ ಬೆಳಗಾವಿ ಡಿಸಿ ಮಹ್ಮದ್ ರೋಷನ್ ಅವರ ಕೋಮು ಸೌಹಾರ್ದತೆಯ ಸಂದೇಶವೇ ಇದಕ್ಕೆ ಸಾಕ್ಷಿಯಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಪರಿಸರಸ್ನೇಹಿ ಗಣೇಶ ಮೂರ್ತಿಗೆ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.
ನಂತರ ಪ್ರತಿವರ್ಷದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಕುಟುಂಬ ಸಮೇತ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಪತ್ನಿ ಅಂಕಿತಾ ವರ್ಮಾ, ಪುತ್ರ ಆಯಾನ್ ಹಾಗೂ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಅಲ್ಲಾವುದ್ದೀನ್ ಶೇಖ
ನ್ಯೂಸ್ ಪ್ರೈಮ್ ಚಿಕ್ಕೋಡಿ