ಅಧಿಕಾರ ಇರುವುದು ಇನ್ನೊಬ್ಬರನ್ನು ಆಳಲು ಅಲ್ಲ. ಜನಸಾಮಾನ್ಯರ ಸೇವೆ ಮಾಡಲು ಎಂಬುದನ್ನು ಅರಿತು ಮುಖದಲ್ಲಿ ನಗು ಹಾಗೂ ಆತ್ಮದಲ್ಲಿ ಸಂತೋಷದಿಂದ ಕೆಲಸ ಮಾಡಿದಾಗ...
ಅಧಿಕಾರ ಇರುವುದು ಇನ್ನೊಬ್ಬರನ್ನು ಆಳಲು ಅಲ್ಲ. ಜನಸಾಮಾನ್ಯರ ಸೇವೆ ಮಾಡಲು ಎಂಬುದನ್ನು ಅರಿತು ಮುಖದಲ್ಲಿ ನಗು ಹಾಗೂ ಆತ್ಮದಲ್ಲಿ ಸಂತೋಷದಿಂದ ಕೆಲಸ ಮಾಡಿದಾಗ ಬದುಕಿನಲ್ಲಿ ಸಂತೃಪ್ತಿ ಹೊಂದಲು ಸಾಧ್ಯ ಎಂದು ಡಿವೈಎಸ್ಪಿ ಶ್ರೀಪಾದ್ ಜಲ್ಲೆ ಹೇಳಿದರು.
ಅವರು ಗುರುವಾರ ಇಲ್ಲಿನ ಸೋಶಿಯಲ್ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಳ್ಕೊಡುಗೆಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಥಣಿ ವಲಯದ ಡಿವೈಎಸ್ಪಿ ಆಗಿ ಕಳೆದ ಎರಡು ವರ್ಷಗಳಿಂದ ನಾನು ಮಾಡಿರುವ ಕೆಲಸ ನನಗೆ ಸಂತೃಪ್ತಿ ತಂದಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮಾಡಿದ ಕರ್ತವ್ಯ ನಿಷ್ಠೆಯಿಂದ ಒಬ್ಬ ಹಿರಿಯ ಅಧಿಕಾರಿಗಳಿಗೆ ಒಳ್ಳೆಯ ಹೆಸರು ಬರುತ್ತದೆ. ಶಿವಯೋಗಿಗಳನಾಡಿನಲ್ಲಿನನಗೆ ಎರಡು ವರ್ಷ ಸೇವೆ ಸಲ್ಲಿಸಲು ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ. ಬೆಳಗಾವಿ ಜಿಲ್ಲೆಯ ಆಡಳಿತಾತ್ಮಕ, ಭೌಗೋಳಿಕ ಭಾವನಾತ್ಮಕವಾಗಿ ನೋಡಿಅನುಭವಿಸಿದ್ದೇನೆ.ಅಥಣಿಯ
ಜನರುಧಾರ್ಮಿಕ ಭಾವನೆ ಉಳ್ಳವರು ಮತ್ತು ಪ್ರಜ್ಞಾವಂತರು. ಜತೆಗೆ ಹೃದಯವಂತರೂ ಇದ್ದಾರೆ.ಇಲ್ಲಿನ ಜನರೊಂದಿಗೆ ಬೆರೆತು ಅನೇಕ ವಿಷಯಗಳನ್ನು ಕಲಿತಿದ್ದೇನೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸರ್ವೇಸಾಮಾನ್ಯ. ಇಲ್ಲಿಯವರಿಗೆ ನಾವು ಮಾಡಿದ ಸೇವೆಯನ್ನು ಪರಿಗಣಿಸಿತಾವೆಲ್ಲರೂ ಶಾಲು ಹೊದಿಸಿ.ಹೂವಿನಮಾಲೆ, ಹೂಗುಚ್ಛ ನೀಡಿ ಹರಸಿದ್ದೀರಿ. ಹೂವು ಹಗುರ ಇರಬಹುದು. ಅದರ ಹಿಂದೆ ಇರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ನೀಡಲಾಗದು. ಎಷ್ಟೇ ಬುದ್ದಿವಂತರಾದರೂ ಆಡಳಿತ ನಿರ್ವಹಣೆಗೆ ಎಲ್ಲರ ಸಹಕಾರ ಬೇಕು. ಎಲ್ಲ ಜನಪ್ರತಿನಿಧಿಗಳು,
ಅಧಿಕಾರಿಗಳು, ಸಿಬ್ಬಂದಿ ಸಹಕಾರ ನೀಡಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸವೇ ಮುಂದಿನ ವೃತ್ತಿ ಬದುಕಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಅಥಣಿ ಡಿವೈಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ಪ್ರಶಾಂತ..
ಜವಾಬ್ದಾರಿ ಹೆಚ್ಚಾಗಿದೆ ಅವರು ಯಾವುದೇಒಂದು ಜಾತಿ ಧರ್ಮಕ್ಕೆ ಸೀಮಿತವಾಗಿರದೇ ಸರ್ವಧರ್ಮಿಯ ಪ್ರೀಯರಾಗಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಆಥಣಿ ಉಪವಿಭಾಗದಸಿಬ್ಬಂದಿಗಳು
ಹಾಗೂ ಸಾರ್ವಜನಿಕರು ಅವರ ಕೆಲಸಕಾರ್ಯಗಳಿಗೆ ಹೇಗೆಸಹಕಾರ ನೀಡಿದ್ದಿರೋ ಹಾಗೆ ನನಗೂ ಸಹ ಸಹಕಾರ ನೀಡಿದರೆ ಜಲ್ಲೆ ಸರ್ ಅವರ ಸ್ಥಾನ ತುಂಬುತ್ತೇನೆ. ಮಹಾತಪಸ್ವಿ ಮುರುಘಂದ್ರ ಶಿವಯೋಗಿಗಳ ನಾಡಿನಲ್ಲಿ ಕೆಲಸ ಮಾಡುವ ಅವಕಾಶ ನನಗೆ ದೊರಕಿರುವುದು ನನ್ನ ಸೌಭಾಗ್ಯ.ಕಾನೂನಿನಇತಿಮಿತಿಯಲ್ಲಿ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತೇನೆ. ತಮ್ಮೆಲ್ಲರ ಸಹಾಯ ಸಹಕಾರ ಅಗತ್ಯ ಎಂದರು.
ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಅನಿವಾರ್ಯ ಶಿವಯೋಗಿಗಳ ಪುಣ್ಯ ಕ್ಷೇತ್ರ ಅಥಣಿ ಉಪ ವಿಭಾಗದ ಜನತೆಯ ಪ್ರೀತಿ ವಿಶ್ವಾಸದ ಋಣ ಎಂದೂ ತೀರಿಸಲಾಗದು. ಕಾನೂನು ಸುವ್ಯವಸ್ಥೆ ಶಾಂತಿ ಕಾಪಾಡುವ ವಿಷಯ ಬಂದಾಗ ಜನತೆ ನನಗೆ ನೀಡಿದ ಸಹಕಾರ ಮರೆಯಲಾಗದು ನಾನು ಕಾರ್ಯನಿರ್ವಹಿಸಿದ 2 ವರ್ಷದ ಅವಧಿ ನನಗೆ ತೃಪ್ತಿ ತಂದಿದೆ. ಹಲವು ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಇಲಾಖೆಯ ಮೇಲಾಧಿಕಾರಿಗಳ, ಅಧಿಕಾರಿಗಳ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಸಹಾಯ ಸಹಕಾರದಿಂದ ನಿಭಾಯಿಸಲು ಸಾಧ್ಯವಾಯಿತು.
ಶ್ರೀಪಾದ್ ಜಲೈ ಡಿವೈಎಸ್ಪಿ
ಮುನ್ನೊಳ್ಳಿಮಾತನಾಡಿ ಶ್ರೀಪಾದ ಜಲ್ಲೆ ಅವರ ಕಾರ್ಯವೈಖರಿ ಮೆಚ್ಚಿಕೊಂಡು ಅಭಿಮಾನದಿಂದ ಬೀಳ್ಕೊಡುಗೆ ಸಮಾರಂಭಕ್ಕೆ ಇಷ್ಟೊಂದು ಜನರು ಆಗಮಿಸಿದ್ದು ನೋಡಿ ತುಂಬಾ ಸಂತೋಷವಾಯಿತು. ಇದರಿಂದಾಗಿ ನನ್ನ ಮೇಲೆ
ಈ ಸಂದರ್ಭದಲ್ಲಿ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಹಾರೂಗೇರಿ ಸಿಪಿಐ ರವಿಚಂದ್ರನ್, ಪಿಎಸ್‌ಐ ಶಿವಾನಂದ ಕಾರಜೋಳ, ರಾಕೇಶ್ ಬಗಲಿ,ಗಂಗಾ ಬಿರಾದಾರ, ಕುಮಾರ ಹಾಡಕರ,ಚಂದ್ರಶೇಖರ ಸಾಗನೂರ, ಕೆ ನಾಗರಾಜ್. ಮಲಕನಗೌಡಾ ಬಿರಾದಾರ, ನ್ಯಾಯವಾದಿ ಕಲ್ಲಪ್ಪ ಒಣಜೋಳ, ದಲಿತ ಮುಖಂಡ ಸಂಜಯ್ ತಳವಲಕರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು
ಅಲ್ಲಾವುದ್ದೀನ್ ಶೇಖ ಸಾರಥ್ಯದಲ್ಲಿ..