*ಸರಳ ಸಜ್ಜನಿಕೆಯ ವ್ಯಕ್ತಿತ್ವ, ಸದಾ ಪ್ರಾಮಾಣಿಕ ಕಾರ್ಯನಿಷ್ಠೆಯ ಕರ್ತವ್ಯದಲ್ಲಿ ತೊಡಿಗಿಸಿಕೊಂಡ ಮೇರು ವ್ಯಕ್ತಿತ್ವ ಶೀವು ಗುಡ್ಡಾಪುರ್* ಊರಲ್ಲೇ ಸರಳವಾಗಿ...
*ಸರಳ ಸಜ್ಜನಿಕೆಯ ವ್ಯಕ್ತಿತ್ವ, ಸದಾ ಪ್ರಾಮಾಣಿಕ ಕಾರ್ಯನಿಷ್ಠೆಯ ಕರ್ತವ್ಯದಲ್ಲಿ ತೊಡಿಗಿಸಿಕೊಂಡ ಮೇರು ವ್ಯಕ್ತಿತ್ವ ಶೀವು ಗುಡ್ಡಾಪುರ್*
ಊರಲ್ಲೇ ಸರಳವಾಗಿ ತನ್ನ 40ನೇ ಜನ್ಮದಿನ ಆಚರಿಸಿಕೊಂಡ ಶಿವು ಗುಡ್ಡಾಪುರ್ .
ಹುಟ್ಟು ಹೋರಾಟಗಾರ ಬಡವರ ಬಂಧು, ಪಕ್ಷಕ್ಕಾಗಿ ದುಡಿದ ಕಟ್ಟಾಳು ತನ್ನ ಹುಟ್ಟು ಹಬ್ಬವನ್ನು ಸ್ವಂತ ಊರಲ್ಲೇ ಅತೀ ಸರಳವಾಗಿ ಆಚರಿಸಿಕೊಂಡ ಪ್ರಾಮಾಣಿಕ ಕಾರ್ಯನಿಷ್ಠೆಯ ಧ್ವನಿ ..ಅದು ಶಿವು ಗುಡ್ಡಾಪುರ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
ಮಾಜಿ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸಂಗಪ್ಪ ಸೌದಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕರಾದ ರಾಜು ಕಾಗೆ ಅವರು ಕೂಡ ಶಿವು ಗುಡ್ಡಪುರವರ ಸ್ವಗ್ರಾಮಕ್ಕೆ ಹೋಗಿ ಆಶೀರ್ವದಿಸಿದ್ದಾರೆ
ಶಿವು ಗುಡ್ಡಪುರವರ ಬಗ್ಗೆ ನಿತ್ಯ ಸಾಮಾಜಿಕ ಸೇವೆಯಲ್ಲಿ ತಮ್ಮಣ್ಣ ತಾವು ತೊಡಗಿಸಿಕೊಂಡು ತನ್ನ ಒಂದು ನಾಯಕತ್ವದಲ್ಲಿ ಚಿಕ್ಕವರು ದೊಡ್ಡವರು ಎಂಬ ಅಹಂ ಭಾವನೆ ಇಲ್ಲದೇ ಸಹಾಯ ಕೇಳಿ ಬರುವ ಜೀವಗಳಿಗೆ ದಾನ ನೀಡುವ ಮೇಧಾವಿ ವ್ಯಕ್ತಿತ್ವ ಇವರದ್ದು.
ಸಮಾನ ಮನಸ್ಕ ಆತ್ಮೀಯತೆಯನ್ನು ಹೊಂದಿರುವ ಸಾಮಾಜಿಕ ನ್ಯಾಯಕ್ಕಾಗಿ ತನ್ನ ಕಾರ್ಯವನ್ನು ನಿತ್ಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವಂತಹ ದಿಟ್ಟ ವ್ಯಕ್ತಿತ್ವದ ಹಾದಿಯಲ್ಲಿ ತನ್ನ 40ನೇ ವಯಸ್ಸಿನಲ್ಲಿ ಇಷ್ಟರಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ ಶ್ಲಾಘನಾರ್ಹ ಸಂಗತಿ.
ಅದೇ ರೀತಿ ಮಾಜಿ ಡಿಸಿಎಂ ಶ್ರೀ ಲಕ್ಷ್ಮಣ್ಣ ಸಂಗಪ್ಪ ಸವದಿ ಅವರ ಸುಪುತ್ರನಾದ ಯುವನಾಯಕ ಚಿದಾನಂದ್ ಸವದಿ ಮಾತನಾಡಿ
ಸಾಕಷ್ಟು ಕಾರ್ಯಕ್ರಮದಲ್ಲಿ ನೋಡಿದ್ದೇನೆ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಜನಸಾಗರವನ್ನು ಕಂಡು ನನಗೆ ತುಂಬಾ ಸಂತೋಷವಾಗೆದೆ. ನನಗೆ ಶಿವು ಗುಡ್ಡಾಪುರ್ 9ನೇ ತರಗತಿಯಿಂದ ಪರಿಚಯ ಅವರನ್ನು ನೋಡಿದ್ದೇನೆ ಈ ತರ ಬೆಳೆಯುವುದನ್ನು ನೋಡಿದರೆ ರಾಜಕಾರಣದಲ್ಲಿ ನನಗಿಂತ ಮುಂದೆ ಹೋಗುತ್ತಾರೆ ಎಂಬ ಆತ್ಮವಿಶ್ವಾಸ, ಊರಲ್ಲಿ ಇಷ್ಟು ವಿಜೃಂಭಣೆಯಿಂದ ತನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಶಿವು ಗುಡ್ಡಾಪುರ್, ತನ್ನ ಊರಿನ ಋಣವನ್ನು ತೀರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕ ನಿಮ್ಮ ನೆಚ್ಚಿನ ನಾಯಕ ಮಾಜಿ ಉಪಮುಖ್ಯಮಂತ್ರಿಗಳು ಶ್ರೀ ಲಕ್ಷ್ಮಣ ಸಂಗಪ್ಪ ಸವದಿ ಅವರ ಸುಪುತ್ರ ಚಿದಾನಂದ ಸವದಿ, ರಾಮನಗೌಡ ಪಾಟೀಲ್, ಸಿದ್ದರಾಯ್ ಗುರುದಾಸಾಳ, ಸೇರಿದಂತೆ ಹಾಗೂ ಗೆಳೆಯರ ಬಳಗದ ಭಾಷಾ ಗಡ್ಡೆಕರ್, ಗೌರೀಶ್ ಹಿರೇಮಠ, ಲೋಹಿತ್ ಪವಾರ್, ಗುರು ಮಾಚಕ್ನವರ್, ಮಾಂತು ಅಪ್ಪು ಪಾಟೀಲ್, ಮಚಗಾರ್ ಸೇರಿದಂತೆ ಎಲ್ಲ ಗೆಳೆಯರ ಬಳಗದವರು ಉಪಸ್ಥಿತರಿದ್ದರು.
ವರದಿ :ಅಲ್ಲಾವುದ್ದೀನ್ ಶೇಖ ಚಿಕ್ಕೋಡಿ