ನಗರಸಭೆ ಪೌರಾಯುಕ್ತರ ಕಚೇರಿ ಮುಂದೆ ಸದಸ್ಯರ ಪ್ರತಿಭಟನೆ..! ರಬಕವಿ ಬನಹಟ್ಟಿ : ನಗರಸಭೆ ಅಧಿಕಾರಿಗಳ ದುರಾಡಳಿತದಿಂದ ಬೇಸತ್ತು ಸದಸ್ಯರು ಪೌರಾಯುಕ್ತರ ...
ನಗರಸಭೆ ಪೌರಾಯುಕ್ತರ ಕಚೇರಿ ಮುಂದೆ ಸದಸ್ಯರ ಪ್ರತಿಭಟನೆ..!
ರಬಕವಿ ಬನಹಟ್ಟಿ :
ನಗರಸಭೆ ಅಧಿಕಾರಿಗಳ ದುರಾಡಳಿತದಿಂದ ಬೇಸತ್ತು ಸದಸ್ಯರು ಪೌರಾಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಘಟನೆ ಜರುಗಿದೆ. ನಿವೇಶನಗಳ ಉತಾರ ಪಡೆಯಲು ಬರುವ ಸಾರ್ವಜನಿಕರಿಗೆ ಸರಿಯಾದ ಸ್ಪಂದನೆ ನೀಡದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ನಗರಸಭೆ ಟ್ಯಾಕ್ಸ್ ಕಟ್ಟಿ 3 ತಿಂಗಳು ಕಳೆದರೂ ಜನರಿಗೆ ಉತಾರ ನೀಡದೆ ತತಾಯಿಸುತ್ತಿದ್ದು ಅಧಿಕಾರಿಗಳ ದುರ್ವರ್ತನೆಗೆ ಬೇಸತ್ತು ಪ್ರತಿಭಟಿಸುವ ಮೂಲಕ ಶೀಘ್ರವೇ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ
ಇನ್ನು ಇದೆ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಸಂಜಯ ತೆಗ್ಗಿ ,ವಿಜಯ ಕಲಾಲ್ ಅರುಣ್ ಬುದ್ನಿ , ಪಿಜಿ ಕಾಖಂಡಕಿ , ಯುನುಸ್ ಚೌಗಲೇ ಶ್ರೀಶೈಲ ಬೀಳಗಿ ಶಂಕರ ಅಂಗಡಿ ಇನ್ನಿತರರು ಉಪಸ್ಥಿತರಿದ್ದರು
ವರದಿ : ಪ್ರದೀಪ್ ದೇಶಪಾಂಡೆ