ಕಾಳ ಸಂತೆಯ ಪಾಲಾಗುತ್ತಿದ್ದ ಪಡಿತರ ಅಕ್ಕಿ ವಶಕ್ಕೆ ..! ಮುಧೋಳ : ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಅನ್ಯಬಾಗ್ಯ ಯೋಜನೆಯ ಅಡಿ ಸರ್ಕಾರ ಬಡವರ ಹಸಿವು ನೀಗಿ...
ಕಾಳ ಸಂತೆಯ ಪಾಲಾಗುತ್ತಿದ್ದ ಪಡಿತರ ಅಕ್ಕಿ ವಶಕ್ಕೆ ..!
ಮುಧೋಳ : ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಅನ್ಯಬಾಗ್ಯ ಯೋಜನೆಯ ಅಡಿ ಸರ್ಕಾರ ಬಡವರ ಹಸಿವು ನೀಗಿಸಲು ಪಡಿತರ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಆದರೆ ಸರ್ಕಾರದ ಉದ್ದೇಶವನ್ನೇ ಬುಡಮೇಲು ಮಾಡಲು ಹೊರಟಿರುವ ಕರಾಳ ದಂದೆಯ ಕಾಣದ ಮುಖಗಳು ಸಕ್ರಿಯವಾಗಿವೆ ಬಡವರಿಗೆ ಹಣದ ಆಸೆ ತೋರಿಸಿ ಅವರಿಂದ ಪಡಿತರ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ಅವ್ಯಾಹತವಾಗಿ ಸಾಗಿದೆ ಸಂಜೆಯಾಗುತ್ತಿದ್ದಂತೆ ಈ ಅಕ್ರಮ ದಂದೇಕೋರರ ಜಾಲ ಸಕ್ರಿಯವಾಗುತ್ತದೆ
ಜಮಖಂಡಿ ಮಾರ್ಗದಿಂದ ಮುಧೋಳ ನಗರಕ್ಕೆ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವೇಳೆ ನಮ್ಮ ವರದಿಗಾರರು ತಡೆದು ಮುಧೋಳ ಠಾಣೆಗೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಆಟೋ ರಿಕ್ಷಾ ಹಾಗೂ ಓರ್ವ ಚಾಲಕನ್ನು ವಶಕ್ಕೆ ಪಡೆದಿದ್ದಾರೆ
ಈ ಅಕ್ರಮ ಪಡಿತರ ಅಕ್ಕಿ ದಂದೇಕೋರರ ಮೇಲೆ ಸಂಬಂದ ಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸುತ್ತರಾ ? ಅಥವಾ ಮುಖ ಪ್ರೇಕ್ಷಕರಂತೆ ವರ್ತಿಸುತ್ತಾರಾ ? ಕಾಯ್ದು ನೋಡಬೇಕಿದೆ
ವರದಿ : ಪ್ರದೀಪ ದೇಶಪಾಂಡೆ