*ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆಯದಂತೆ ಎಚ್ಚರಿಕೆ ವಹಿಸಿ ಅಧಿಕಾರಿಗಳಿಗೆ ಹಿಂದೂ ಸಂಘಟನೆಗಳ ಆಗ್ರಹ* ಬಾಗಲಕೋಟೆ : ಮುಸ್ಲಿಂ ಸಮಾಜದ ಹಬ್ಬಗಳಲ್ಲಿ ಒಂದಾದ ...
*ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆಯದಂತೆ ಎಚ್ಚರಿಕೆ ವಹಿಸಿ ಅಧಿಕಾರಿಗಳಿಗೆ ಹಿಂದೂ ಸಂಘಟನೆಗಳ ಆಗ್ರಹ*
ಬಾಗಲಕೋಟೆ : ಮುಸ್ಲಿಂ ಸಮಾಜದ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬ ದಿನಾಂಕ 17 /06/2024 ರಂದು ಇದ್ದು ಹಬ್ಬದಂದು ಹತ್ಯೆ ಮಾಡಲು ಅಕ್ರಮವಾಗಿ ಜಾನುವಾರುಗಳ ಸಾಗಾಟ ಹೆಚ್ಚಾಗಿದ್ದು ಗೋಹತ್ಯೆ ಆಗುವ ಸಂಭವವಿದೆ ಈಗಾಗಲೇ ರಾಜ್ಯದಲ್ಲಿ ಗೋ ರಕ್ಷಕರು ಹಿಂದೂ ಸಂಘಟನೆ ಕಾರ್ಯಕರ್ತರ ಗೋವಿನ ರಕ್ಷಣೆ ಮಾಡುತ್ತಿದ್ದಾರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ ಗೋಹತ್ಯೆಯನ್ನು ಯಾವುದೇ ಕಾರಣಕ್ಕೂ ಸಹಿಸುವದಿಲ್ಲ ಅಧಿಕಾರಿಗಳು ಎಚ್ಚತ್ತುಕೊಂಡು ಗೋಹತ್ಯೆ ನಡೆಯದಂತೆ ನಿಗಾವಹಿಸಬೇಕಿದೆ ಹಾಗೆ ಮುಸ್ಲಿಂ ಸಮಾಜದವರು ಕೂಡಾ ಹಿಂದುಗಳ ಧಾರ್ಮಿಕ ಭಾವನೆಗೆ ಬೆಲೆ ಕೊಟ್ಟು ಹಿಂದುಗಳು ಪೂಜಿಸುವ ಗೋವನ್ನು ಯಾವುದೇ ಕಾರಣಕ್ಕೂ ಹತ್ಯೆ ಮಾಡದೆ ಸೌಹಾರ್ದಯುತವಾಗಿ ಹಬ್ಬ ಆಚರಿಸಿ ಎಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರದ ಹಿಂದೂ ಸಂಘಟನೆಗಳ ಪ್ರಮುಖರು ಮತ್ತು ಬಾಜಪ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ
ಇನ್ನು ಇದೆ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಂಜಯ ತೆಗ್ಗಿ, ವಿಶ್ವ ಹಿಂದೂ ಪರಿಷತ್ ಮುಖಂಡ ವಿರುಪಾಕ್ಷಯ್ಯ ಮಠದ , ಬಾಜಪ ನಗರ ಮಂಡಲ ಅಧ್ಯಕ್ಷ ಶ್ರೀಶೈಲ ಬೀಳಗಿ ,ಶಿರಾಮ ಸೇನೆ ಜಿಲ್ಲಾಧ್ಯಕ್ಷ ಯಮನಪ್ಪ ಕೋರಿ ಹರೀಶ್ ನಾಜರೆ ಇನ್ನಿತರರು ಉಪಸ್ಥಿತರಿದ್ದರು
ವರದಿ : ಪ್ರದೀಪ್ ದೇಶಪಾಂಡೆ