ಗರ್ಭಪಾತ ಮಾಡಿಸಿಕೊಂಡು ಮರಳುವಾಗ ಮೃತರಳಾದ ಗರ್ಭಿಣಿ ..! ಬಾಗಲಕೋಟೆ : ಭ್ರೂಣಲಿಂಗ ಪರೀಕ್ಷೆ ಹಾಗೂ ಗರ್ಭಪಾತ ಅಪರಾಧ ಎಂಬುದು ಗೊತ್ತಿದ್ದರೂ ಇಂತಹ ಪ್ರಕರಣ ಅ...
ಗರ್ಭಪಾತ ಮಾಡಿಸಿಕೊಂಡು ಮರಳುವಾಗ ಮೃತರಳಾದ ಗರ್ಭಿಣಿ ..!
ಬಾಗಲಕೋಟೆ : ಭ್ರೂಣಲಿಂಗ ಪರೀಕ್ಷೆ ಹಾಗೂ ಗರ್ಭಪಾತ ಅಪರಾಧ ಎಂಬುದು ಗೊತ್ತಿದ್ದರೂ ಇಂತಹ ಪ್ರಕರಣ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಭ್ರೂಣಲಿಂಗ ಪತ್ತೆ ಬಳಿಕ ಗರ್ಭಪಾತ ಮಾಡಿಸಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಮಹಾಲಿಂಗಪುರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಸೋನಾಲಿ (33) ಮೃತ ಮಹಿಳೆ. ಮಹಾಲಿಂಗಪುರ ಕಾಸಗಿ ಆಸ್ಪತ್ರೆಯ ಮಾಜಿ ಆಯಾ ಕವಿತಾ ಬಾಡನವರ್ ಸೋನಾಲಿಗೆ ಗರ್ಭಪಾತ ಮಾಡಿದ್ದರು. ಸೊನಾಲಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಮೂರನೆ ಬಾರಿ ಗರ್ಭಿಣಿಯಾಗಿದ್ದ ಸೋನಾಲಿ, ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಬೃಣಲಿಂಗ ಪತ್ತೆ ಮಾಡಿಸಿದಾಗ ಹೊಟ್ಟೆಯಲ್ಲಿ ಹೆಣ್ಣು ಮಗು ಇರುವುದು ಗೊತ್ತಾಗಿದೆ. ಮೂರನೆಯದೂ ಹೆಣ್ಣೆಂದು ಗರ್ಭಪಾತ ಮಾಡಿಸಲು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ನಕಲಿ ವೈದ್ಯೆ ಕವಿತಾ ಬಾಡನವರ್ ಬಳಿ ಮಹಿಳೆ ಬಂದಿದ್ದರು.
ಕವಿತಾ ಬಾಡನವರ್ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯ ಮಾಜಿ ಆಯಾ. ನಿನ್ನೆ ಬೆಳಿಗ್ಗೆ 9 ಗಂಟೆಗೆ ಬಂದಿದ್ದ ಸೋನಾಲಿಗೆ ಕವಿತಾ ಗರ್ಭಪಾತ ಮಾಡಿಸಿ ಕಳುಹಿಸಿದ್ದರು. ಗರ್ಭಪಾತದ ಬಳಿಕ ಸೋನಾಲಿ ತೀವ್ರ ರಕ್ತಸ್ರಾವದಿಂದ ಮೂರ್ಛೆ ಹೋಗಿದ್ದರು ಬಳಿಕ ಬೇರೆಡೆ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಕಾರಿನಲ್ಲಿ ಸೋನಾಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಮಹಾಲಿಂಗಪುರ ಪೊಲೀಸರು ಆರೋಪಿಯನ್ನು ಬಂದಿಸಿದ್ದು ವಿಚಾರಣೆ ಕೈಗೊಂಡಿದ್ದಾರೆ
ವರದಿ : ಪ್ರದೀಪ್ ದೇಶಪಾಂಡೆ