ಕರ್ನಾಟಕ ರಾಜ್ಯ ಡಾ|| ಪಂಡಿತ್ ಪುಟ್ಟರಾಜ್ ರೈತ ಸಂಘ ಗದಗ ಬಾಗಲಕೋಟ ಜಿಲ್ಲೆಗಳ ನಂತರ ಬೆಳಗಾವಿಜಿಲ್ಲೆಯಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿ, ಪದಾಧಿಕಾರಿ...
ಕರ್ನಾಟಕ ರಾಜ್ಯ ಡಾ|| ಪಂಡಿತ್ ಪುಟ್ಟರಾಜ್ ರೈತ ಸಂಘ ಗದಗ ಬಾಗಲಕೋಟ ಜಿಲ್ಲೆಗಳ ನಂತರ ಬೆಳಗಾವಿಜಿಲ್ಲೆಯಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿ, ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪ್ರತಿಗಳನ್ನು ವಿತರಣೆ
ಗದಗ 24: ದಿನಾಂಕ 23/05/2024 ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕ ಘಟಕವನ್ನು ಹಾಗೂಯಡ್ರಾವಿ, ಸುತಗಟ್ಟಿ ಗ್ರಾಮ ಘಟಕಗಳನ್ನು ಜ್ಯೋತಿ ಬೆಳಗಿಸು ಮೂಲಕ ಉದ್ಘಾಟಿಸಲಾಯಿತು ಉದ್ಘಾಟನೆಯನ್ನುಡಾ|| ಪಂಡಿತ್ ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ. ಪಿ ಮುಳುಗುಂದ ಹಾಗೂ ಸಂಘದರಾಜ್ಯ ಉಪಾಧ್ಯಕ್ಷರಾದ ದಾವಲಸಾಬ್ ನಾಗನೂರ ಹಿರಿಯರಾದ ಎಚ್ ಎಚ್ ಕೊಪ್ಪಳ, ಶಬೀರ್ ಮುಲ್ಲಾ, ಎಂಪಿ ಶಲವಡಿ, ಹಾಗೂ ಸವದತ್ತಿ ತಾಲೂಕ ಹಿರಿಯರು ಕೂಡಿ ಉದ್ಘಾಟಿಸಿದರು ಉದ್ಘಾಟನೆಯ ನಂತರ ಸಂಘದದಯೋದ್ದೇಶ ಸಂಘದ ಕಾರ್ಯ ಮುಂದುವರೆಸಿಕೊಂಡು ಹೋಗುವ ಬಗ್ಗೆ ವಿವರವಾಗಿ ಅಧ್ಯಕ್ಷರು ತಮ್ಮಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘಕ್ಕೆ ರಾಜ್ಯ ಕಾರ್ಯದರ್ಶಿಯಾಗಿ ಉಮೇಶ್ಗೋವನಕೊಪ್ಪ ಇವರನ್ನು ನೇಮಿಸಿ ಆದೇಶ ಪ್ರತಿಯನ್ನು ನೀಡಲಾಯಿತು.
ಅದೇ ರೀತಿ ಸವದತ್ತಿ ತಾಲೂಕ ಅಧ್ಯಕ್ಷರಾಗಿ ಕೆಂಚಪ್ಪ ಬಿದರಗಟ್ಟಿ, ಉಪಾಧ್ಯಕ್ಷರಾಗಿ ಭೀಮಪ್ಪ ಜೇಡರಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ರಾಮಪ್ಪ ಹಾಸಟೆ, ಪರಿಶಿಷ್ಟ ಪಂಗಡ ಮಹಿಳಾ ಘಟಕದ ಅಧ್ಯಕ್ಷೆಯರಾಗಿಅರ್ಪಿತಾ ಹೊಸಟ್ಟಿ, ಸುತಗಟ್ಟಿ ಗ್ರಾಮ ಘಟಕದ ಅಧ್ಯಕ್ಷರಾಗಿ ಶಿವಜಾತಯ್ಯ ಹಿರೇಮಠ, ಸವದತ್ತಿ ಯುವ ಘಟಕದಅಧ್ಯಕ್ಷರಾಗಿ ಮನೋಹರ ಸೊಗಲದ, ಗ್ರಾಮ ಘಟಕದ ಸದಸ್ಯರಾಗಿ ಲಗ್ನವರ, ಸೊಗಲದ, ಸಿದ್ದಪ್ಪ ಮುತ್ನಾಳ್,ಬಸವಂತ ಮುತ್ನಾಳ ಇನ್ನೂ ಅನೇಕ ಜನ ಆದೇಶ ಪ್ರತಿಗಳನ್ನು ಪಡೆದುಕೊಂಡು ಸಂಘದಲ್ಲಿ ಪ್ರಮಾಣಿಕವಾಗಿಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇನೆ ಎಂದು ಕಾರ್ಯಕ್ರಮ ನಡೆದ ಸುತಗಟ್ಟಿ ಗ್ರಾಮದ ಶ್ರೀ ಬಸವೇಶ್ವರದೇವಸ್ಥಾನದಲ್ಲಿ ಪ್ರಮಾಣ ಸ್ವೀಕರಿಸಿದರು.
ಕಾರ್ಯಕ್ರಮಕ್ಕೆ ರೈತ ಸಂಘದ ರಾಜ್ಯ ಮುಖಂಡರು ಹಾಗೂ ಜಿಲ್ಲಾಮುಖಂಡರು ಸವದತ್ತಿ ತಾಲೂಕಿನ ಯಡ್ರಾವಿ ಸುತಗಟ್ಟಿ ಗ್ರಾಮದ ಅನೇಕ ಜನ ರೈತ ಮುಖಂಡರು ಊರಿನಹಿರಿಯರು ಭಾಗವಹಿಸಿದ್ದರು.