ಬನಹಟ್ಟಿ ಪೊಲೀಸರ ಕಾರ್ಯಾಚರಣೆ , ಅಂತರ್ ರಾಜ್ಯ ಬೈಕ್ ಕಳ್ಳನ ಬಂಧನ .. ಬಾಗಲಕೋಟೆ / ರಬಕವಿ- ಬನಹಟ್ಟಿ : ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಮರನಾಥ್ ರೆಡ್ಡಿ ...
ಬನಹಟ್ಟಿ ಪೊಲೀಸರ ಕಾರ್ಯಾಚರಣೆ , ಅಂತರ್ ರಾಜ್ಯ ಬೈಕ್ ಕಳ್ಳನ ಬಂಧನ ..
ಬಾಗಲಕೋಟೆ / ರಬಕವಿ- ಬನಹಟ್ಟಿ : ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಮರನಾಥ್ ರೆಡ್ಡಿ ಹಾಗೂ ಜಿಲ್ಲಾ ಹೆಚ್ಚುವರಿ 1 ಪೊಲೀಸ್ ಅಧೀಕ್ಷಕರು ಪ್ರಸನ್ನ ದೇಸಾಯಿ ಮತ್ತು ಜಿಲ್ಲಾ ಪೊಲೀಸ್ ಹೆಚ್ಚುವರಿ 2 ಮಹಾಂತೇಶ್ ಜಿದ್ದಿ ಮತ್ತು ಜಮಖಂಡಿಯ ಉಪ ವಿಭಾಗದ ಪೊಲೀಸ್ ಉಪಾ ಆದಿಕ್ಷಕರು ಹಾಗೂ ಬನಹಟ್ಟಿ ನಗರದ ಸಿಪಿಐ ಸಂಜೀವ್ ಬಳೆಗಾರ ಇವರೆಲ್ಲರ ಜಂಟಿ ಮಾರ್ಗದರ್ಶನದಲ್ಲಿ , ಬನಹಟ್ಟಿ ನಗರದ ಪೊಲೀಸ್ ಠಾಣೆ ಅಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ಹಾಗೂ ಅಪರಾಧ ವಿಭಾಗದ ಪಿಎಸ್ಐ ಡಿ ಬಿ ಕೋತ್ವಾಲ್ ಹಾಗೂ ಇವರ ತನಿಖಾ ತಂಡವಾದ ಎಸ್ಎಸ್ ಬಾಬಾನಗರ ಎಎಸ್ಐ , ಪೊಲೀಸ್ ಸಿಬ್ಬಂದಿ ಜನರಾದ ಎಂ ಡಿ ಸೌದಿ , ಡಿ ಬಿ ಕುಂಬಾರ್ , ಶ್ರೀಮಂತ ಹುಕ್ಕೇರಿ ವಿ ಎಸ್ ಅಜ್ಜನಗೌಡರ್ ಎ ಎಂ ಜಮಖಂಡಿ ಇವರೆಲ್ಲರೂ ಸೇರಿ 8 -4 - 2024 ರಂದು ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಗ್ರಾಮದ ಜಲಾಶಯ ಹತ್ತಿರ ವಾಹನಗಳನ್ನು ಪರಿಶೀಲಿಸುತ್ತಿರುವಾಗ ಸಂಶಯಸ್ಪದವಾಗಿ ಕಳ್ಳತನ ಮಾಡಿದ ಮೋಟರ್ ಸೈಕಲ್ ಸಮೇತ ಸಿಕ್ಕ ಆರೋಪಿ ವಿಶ್ವನಾಥ್ ವಿಟ್ಟಲ್ ಗುರವ್ವ ವಯಸ್ಸು 24 , ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ, ನಂದೇಶ್ವರ ಗ್ರಾಮದ ಈತನಿಗೆ ದಸ್ತಗಿರಿ ಮಾಡಿದ ನಂತರ, ಈತನ ತಾಬಾದಲ್ಲಿ ಇರುವಂತಹ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಕಳ್ಳತನವಾದ 1 )ಯಮಹ ಕಂಪನಿಯ ಎಫ್ ಝೆಡ್ ಮೋಟಾರ್ ಸೈಕಲ್ , ನೆರೆಯ ಮಹಾರಾಷ್ಟ್ರ ರಾಜ್ಯದ ಜತ್ ಪೊಲೀಸ್ ಠಾನ ವ್ಯಾಪ್ತಿಯಲ್ಲಿ ಕಳ್ಳತನವಾದ ಮೋಟರ್ ಸೈಕಲ್ ಹೀರೋ ಕಂಪನಿಯ ಸ್ಪ್ಲೆಂಡರ್ ಪ್ರೊ , 3 ) ರಾಯಲ್ ಏನ್ ಫೀಲ್ಡ್ ಬುಲೆಟ್ ಮೋಟಾರ ಸೈಕಲ್ 4 ) ಹಾಗೂ ಹೋಂಡಾ ಕಂಪನಿಯ ಶೈನ್ ಮೋಟರ್ ಸೈಕಲ್ ಅಂದಾಜು ಒಟ್ಟು 240,000 ಮೌಲ್ಯದ ನಾಲ್ಕು ಮೋಟರ್ಸ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು , ಆರೋಪಿತನಿಗೆ ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
ವರದಿ ಪ್ರದೀಪ್ ದೇಶಪಾಂಡೆ