ಅಥಣಿ: ಅನ್ಯಭಾಷೆಯ ಪ್ಲೆಕ್ಸ್ ಅಳವಡಿಕೆ, ಕರವೇ ಸದಸ್ಯರಿಂದ ಕಲ್ಲು ತೂರಾಟ.. ಅಥಣಿ : ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ...
ಅಥಣಿ: ಅನ್ಯಭಾಷೆಯ ಪ್ಲೆಕ್ಸ್ ಅಳವಡಿಕೆ,
ಕರವೇ ಸದಸ್ಯರಿಂದ ಕಲ್ಲು ತೂರಾಟ..
ಅಥಣಿ : ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ
ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರನ್ನ ಪೊಲೀಸರು ಬಂಧಿಸಿದ್ದು,
ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ
ಅಥಣಿಯಲ್ಲಿ ಕರವೇ ಸಂಘಟನೆಯಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಅಥಣಿ ಪಟ್ಟಣದ ಶಿವಯೋಗಿ ಸರ್ಕಲ್ ನಲ್ಲಿ
ವಿಜಯಪುರ- ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ
ತಡೆದು ಪ್ರತಿಭಟನಾಕಾರರು ಕರವೇ ಅಧ್ಯಕ್ಷ
ನಾರಾಯಣಗೌಡರನ್ನು ಬಿಡುಗಡೆ ಮಾಡುವಂತೆ
ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ
ಕೂಗಿದರು.ನಂತರ ಪಟ್ಟಣದ ಬೀದಿ ಬದಿಗಳಲ್ಲಿ ಅಳವಡಿಸಿದ ಇಂಗ್ಲಿಷ್ ಬಳಕೆಯ ಬ್ಯಾನರ್ ಗಳನ್ನ ಹರಿದು ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಾಟ ಮಾಡಿದ ಕರವೇ ಸದಸ್ಯರು ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆ ತಾರಕಕ್ಕೇರುತ್ತಿದಂತೆ
ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು
ಬಂಧನಕ್ಕೊಳಪಡಿಸಿದ್ದಾರೆ.