ಹಾವೇರಿ: ಜಿಲ್ಲಾ ಪಂಚಾಯಿತಿಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಲ್.ಕಲೋಳಿಕರ ಮತ್ತು ತಾಲ್ಲೂಕು ಯೋಜನಾಧಿಕಾ...
ಹಾವೇರಿ: ಜಿಲ್ಲಾ ಪಂಚಾಯಿತಿಯ ಪಂಚಾಯತ್
ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಭಾರ
ಕಾರ್ಯನಿರ್ವಾಹಕ ಎಂಜಿನಿಯರ್
ಡಿ.ಎಲ್.ಕಲೋಳಿಕರ ಮತ್ತು ತಾಲ್ಲೂಕು
ಯೋಜನಾಧಿಕಾರಿ ಮಲ್ಲಿಕಾರ್ಜುನ ಬಿಕ್ಕಣ್ಣನವರ
ಈ ಇಬ್ಬರು ಲಂಚ ಪ್ರಕರಣದಲ್ಲಿ ಶುಕ್ರವಾರ
ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದ
ಚರಂಡಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ
74 ಲಕ್ಷ ಬಿಲ್ ಪಾವತಿಸಲು ಶೇ 2ರಷ್ಟು ಕಮಿಷನ್
ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ
ಶೇ 1ರಷ್ಟು ಕಮಿಷನ್ ನೀಡುವಂತೆ ಒತ್ತಡ
ಹಾಕಿದ್ದರು. ಈ ಬಗ್ಗೆ ಇಟಗಿ ಗ್ರಾಮದ ಗುತ್ತಿಗೆದಾರ
ಹಾಲಪ್ಪ ಕುರುವತೇರ ಲೋಕಾಯುಕ್ತ
ಪೊಲೀಸರಿಗೆ ದೂರು ನೀಡಿದ್ದರು.
ಡಿ.ಎಲ್. ಕಲ್ಲೋಳಿಕರ ಅವರ ಸೂಚನೆ ಮೇರೆಗೆ
ಮಲ್ಲಿಕಾರ್ಜುನ ಬಿಕ್ಕಣ್ಣನವರ ಕಚೇರಿಯಲ್ಲಿ 4
ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ
ಪೊಲೀಸರು ಬಂಧಿಸಿದ್ದಾರೆ. ಶಿಗ್ಗಾವಿ ತಾಲ್ಲೂಕಿನ
ತಡಸ ಗ್ರಾಮದ ಬಳಿ ಕಾರ್ಯನಿರ್ವಾಹಕ
ಎಂಜಿನಿಯರ್ ಕಲ್ಲೋಳಿಕರ ಅವರನ್ನು
ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯ
ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ದಾಳಿ
ನಡೆದಿದ್ದು, ತನಿಖೆ ಮುಂದುವರಿದಿದೆ.