ಅಬಕಾರಿ ಸಚಿವರ ತವರು ಜಿಲ್ಲೆಯಲ್ಲೇ ಅಬಕಾರಿ ನಿಯಮಗಳ ಉಲ್ಲಂಘನೆಯೇ..!? ಬಾಗಲಕೋಟೆ:* ಜಿಲ್ಲೆಯ ಗಡಿಬಾಗದ ತಾಲೂಕು ಕೇಂದ್ರವಾದ ರಬಕವಿ ಬನಹಟ್ಟಿ ನೇಕಾರ ನಗರಿ ...
ಅಬಕಾರಿ ಸಚಿವರ ತವರು ಜಿಲ್ಲೆಯಲ್ಲೇ ಅಬಕಾರಿ ನಿಯಮಗಳ ಉಲ್ಲಂಘನೆಯೇ..!?
ಬಾಗಲಕೋಟೆ:* ಜಿಲ್ಲೆಯ ಗಡಿಬಾಗದ ತಾಲೂಕು ಕೇಂದ್ರವಾದ ರಬಕವಿ ಬನಹಟ್ಟಿ ನೇಕಾರ ನಗರಿ ಎಂದೇ ಖ್ಯಾತಿ ಪಡೆದಿತ್ತು ಇಂದು ಆ ಹೆಸರಿಗೆ ಕಪ್ಪು ಚುಕ್ಕೆಯಂತೆ ಅನಧಿಕೃತ ಅಕ್ರಮ ದಂದೆಗಳು ರಾಜಾರೋಷವಾಗಿ ನಡೆಯುತ್ತಿವೆ ಇನ್ನು ಈ ದಂದೆಗಳಲ್ಲಿ ಪ್ರಮುಖ ಪಾತ್ರ ವಹಿಸೋದೆ ಬಾರ್ ಮತ್ತು ವೈನ್ ಶಾಪಗಳು ಇಲ್ಲಿನ ಬಾರ್ ಮತ್ತು ವೈನ್ ಶಾಪಗಳಿಗೆ ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಕಾಯಿದೆ,ನಿಯಮಗಳು ಯಾವುದು ಲೆಕ್ಕಕ್ಕಿಲ್ಲದಂತಾಗಿದೆ ಬೆಳಗಿನಜಾವ 7 ,8 ಗಂಟೆಗೆ ಆರಂಭ ಆಗುವ ವೈನ್ ಶಾಪಗಳು ಮುಚ್ಚೋದು ಮಾತ್ರ ರಾತ್ರಿ 11 ಗಂಟೆಯ ಮುಂದೇನೆ ಇನ್ನು ಅಬಕಾರಿ ನಿಯಮದ ಪ್ರಕಾರ CL2 ಪರವಾನಿಗೆ ಹೊಂದಿರುವ ವೈನ್ ಶಾಪಗಳು ಮದ್ಯ ಮಾರಾಟ ಮಾಡಬೇಕಷ್ಟೆ
ಆದರೆ ರಬಕವಿ ನಗರದ ಜಮಖಂಡಿ ಕುಡಚಿ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಜನತಾ ವೈನ್ ಶಾಪ್ ತದ್ವಿರುದ್ಧವಾಗಿದೆ.ಇಲ್ಲಿ ಅಬಕಾರಿ ಇಲಾಖೆಯ ಯಾವುದೇ ನಿಯಮಗಳು ಲೆಕ್ಕಕ್ಕಿಲ್ಲ ಯಾವುದೇ ಬಾರ್ &ರೆಸ್ಟೋರೆಂಟ್ ಗೆ ಕಡಿಮೆ ಇಲ್ಲದಂತೆ ಒಳಗಡೆ ಕುಳಿತು ಕುಡಿಯಲು ಆಸನದ ವ್ಯವಸ್ಥೆ, ಮನಸೋ ಇಚ್ಛೆ ದರ ನಿಗದಿಮಾಡಿ ಜನಗಳಿಂದ ಸುಲಿಗೆ ಮಾಡುತ್ತಿರುವದನ್ನ ನೋಡಿದ್ರೆ ಅಧಿಕಾರಿಗಳು ಇವರೊಂದಿಗೆ ಕೈ ಜೋಡಿಸಿದ್ದಾರಾ? ಅನ್ನೋ ಸಂಶಯ ಸಾರ್ವಜನಿಕರಲ್ಲಿ ಮೂಡುತ್ತಿದೆ ಇಂತಹ ವೈನ್ ಶಾಪಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ?
ಅಥವಾ ನೋಡಿಯು ನೋಡದಂತೆ ಸುಮ್ಮನೆ ಕುಳಿತುಕೊಳ್ಳುತ್ತಾರಾ ? ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ತವರು ಜಿಲ್ಲೆಯಲ್ಲಿಯೇ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಾ? ಅನ್ನೋದನ್ನ ಕಾಯ್ದು ನೋಡಬೇಕಿದೆ.
*ಪ್ರದೀಪ್ ದೇಶಪಾಂಡೆ*
*ಬಾಗಲಕೋಟೆ*