ಬೇಕಾಬಿಟ್ಟಿ ವಾಹನ ಚಾಲನೆ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಖಾಕಿ ಪಡೆ ಇತ್ತೀಚೆಗೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ ರಸ್ತೆ ಅಪಘಾತಗಳನ್ನು ತ...
ಬೇಕಾಬಿಟ್ಟಿ ವಾಹನ ಚಾಲನೆ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಖಾಕಿ ಪಡೆ
ಇತ್ತೀಚೆಗೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸರ್ಕಾರ ನಿರಂತರ ಹಲವಾರು ಕಾಯ್ದೆ ಕಾನೂನುಗಳನ್ನು ಜಾರಿಗೆ
ತಂದರು ಸಾರ್ವಜನಿಕರು ಅದನ್ನು ಪಾಲಿಸದೆ ಅಪಘಾತಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಸಾವಿರಾರು ಘಟನೆಗಳು ಜರುಗಿತ್ತಿವೆ
ಅದರಂತೆ ಬಾಗಲಕೋಟೆ ಮತ್ತು ಬೆಳಗಾವಿಯ ಗಡಿಬಾಗದ ನಗರವಾದ ತೇರದಾಳ ಸುತ್ತಮುತ್ತಲು ಹತ್ತಾರು ಸಕ್ಕರೆ ಕಾರ್ಖಾನೆಗಳುನ್ನು ಹೊಂದಿದೆ ಇನ್ನು ಇದೀಗ ತಾನೇ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದು ರೈತರು ತಾವು ಬೆಳೆದಂತ ಕಬ್ಬನ್ನ ಕಾರ್ಖಾನೆಗಳಿಗೆ ಪೂರೈಸುವಲ್ಲಿ ನಿರತರಾಗಿದ್ದಾರೆ ಕಬ್ಬು ಸಾಗಿಸುವ ಟ್ರಾಕ್ಟರ್ ಚಾಲಕರು ಹಿಂಬದಿಯಲ್ಲಿ ಯಾವುದೇ ಪ್ರತಿಫಲಕ ಹಾಕದೆ ವಾಹನ ಚಲಾವಣೆ ಮಾಡುವುದರಿಂದ ರಾತ್ರಿಯ ಸಮಯದಲ್ಲಿ ವಾಹನ ಸವಾರರಿಗೆ ಕಬ್ಬು ತುಂಬಿದ ಗಾಡಿಗಳು ಕಾಣದೆ ಅಪಘಾತಗಳು ಆಗಿರುವುದು ಸಾಕಷ್ಟು ಬಾರಿ ಕಂಡು ಬಂದಿದೆ.
ಸಾರ್ವಜನಿಕರಲ್ಲಿ ರಸ್ತೆ ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸಲು ಸಜ್ಜಾದ ತೇರದಾಳ ಪೊಲೀಸ್ ಠಾಣೆಯ ಸಿಂಗಂ ಎಂದು ಖ್ಯಾತಿಯಾಗಿರುವ ಪಿ ಎಸ್ ಐ ಅಪ್ಪಣ್ಣ ಐಗಳಿ ಹಾಗೂ ಸಿಬ್ಬಂದಿ ಸಂಗಮೇಶ ಸೋನೋನೆ ರಸ್ತೆ ನಿಯಮಗಳನ್ನು ಪಾಲನೆ ಮಾಡದೆ ಬೇಕಾಬಿಟ್ಟಿ ವಾಹನ ಚಲಾವಣೆ ಮಾಡುವವರಿಗೆ ಖಡಕ್ ವಾರ್ನಿಂಗ್ ನೀಡುವ ಮೂಲಕ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿ ಹೇಳುವ ದೃಶ್ಯ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿ ನಗರದಲ್ಲಿ ಕಂಡುಬಂದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ವರದಿ : ಪ್ರದೀಪ್ ದೇಶಪಾಂಡೆ