Mysuru Dasara:ಇಂದಿನಿಂದ ಮೈಸೂರು ದಸರಾ ಕಲರವ; ಮಧುವಣಗಿತ್ತಿಯಂತೆ ಸಿಂಗಾರಗೊಂಡ ಸಾಂಸ್ಕೃತಿಕ ನಗರ ಮೈಸೂರು;- 416ನೇ ಅದ್ಧೂರಿ ಐತಿಹಾಸಿಕ, ವಿಶ್ವಪ್ರಸಿದ್...
ಮೈಸೂರು;- 416ನೇ ಅದ್ಧೂರಿ ಐತಿಹಾಸಿಕ, ವಿಶ್ವಪ್ರಸಿದ್ಧ ದಸರಾ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ.
ಸಾಂಸ್ಕೃತಿಕ ತೇರು, ಪರಂಪರೆಯ ಮೇರು ನಗರ ಮೈಸೂರಲ್ಲಿ ದಸರಾ ಸಂಭ್ರಮ ಸಡಗರ ಕಣ್ತುಂಬಿಕೊಳ್ಳಬಹುದು.
ದಸರಾ ಮಹೋತ್ಸವ 2023 ಉದ್ಘಾಟನೆಯನ್ನ ನಾದಬ್ರಹ್ಮ ಡಾ.ಹಂಸಲೇಖ ನೆರವೇರಿಸಲಿದ್ದಾರೆ. ಬೆಳಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನ ದಲ್ಲಿ ಚಾಮುಂಡಿ ದೇವಿಯ ಅಗ್ರ ಪೂಜೆ ನೆರವೇರಿಸುವ ಮೂಲಕ ದಸರಾಗೆ ಚಾಲನೆ ಸಿಗಲಿದೆ. ಸಂಜೆ 6:30 ರಿಂದ 7:15ರ ಶುಭಮೇಷ ಲಗ್ನದಲ್ಲಿ ಅರಮನೆಯಲ್ಲಿ ಪೂಜೆಗಳು ನೆರವೇರಲಿದೆ.
ಚಾಮುಂಡಿ ಬೆಟ್ಟ, ಅರಮನೆ ಅಂಗಳದಲ್ಲಿ ಬೃಹತ್ ವೇದಿಕೆಗಳು ನಿರ್ಮಾಣವಾಗಿವೆ. ದಸರಾಗಾಗಿ ಸಿಎಂ ಸಿದ್ದರಾಮಯ್ಯ 3 ದಿನಗಳ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶರನ್ನವ ರಾತ್ರಿಯ 9 ದಿನಗಳ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ.
ಇದಕ್ಕೂ ಮೊದಲು ನಾದಬ್ರಹ್ಮ ಹಂಸಲೇಖ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸುವರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಾಗಿರ್ತಾರೆ