ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಸಂಬಂಧಪಟ್ಟ ಹಾಗೆ ಸರ್ಕಾರ ಮಹತ್ವದ ಅಪ್ಡೇಟ್ ಒಂದನ್ನು ನೀಡಿದೆ, ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಆದ ನ...
ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಸಂಬಂಧಪಟ್ಟ ಹಾಗೆ ಸರ್ಕಾರ ಮಹತ್ವದ ಅಪ್ಡೇಟ್ ಒಂದನ್ನು ನೀಡಿದೆ, ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಆದ ನಂತರ ಎರಡನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಅಂತ ಜನರು ಕಾದು ಕುಳಿತಿದ್ದಾರೆ. ಇದಕ್ಕೆ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಹಿರಂಗವಾಗಿ ಉತ್ತರ ನೀಡಿದ್ದಾರೆ.
ಮೊದಲ ಕಂತಿನ ಹಣಕ್ಕೆ ಮೀಸಲಿಟ್ಟ ಹಣ ಎಷ್ಟು ಗೊತ್ತಾ?
ಅಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿತ್ತು, ಅಲ್ಲಿಂದ ಫಲಾನುಭವಿಗಳ ಖಾತೆಗೆ (Bank Account) ಸಾವಿರ ರೂಪಾಯಿಗಳನ್ನು ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದೆ
ಮೊದಲು ತಿಂಗಳಿನಲ್ಲಿ ಸುಮಾರು 1.8 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದರು, ಇದಕ್ಕಾಗಿ ಸರ್ಕಾರ ಮೀಸಲಿಟ್ಟ ಹಣ 2169 ಕೋಟಿ ರೂಪಾಯಿಗಳು. ಇನ್ನು ಸಪ್ಟೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆ 1.14 ಕೋಟಿಗೆ ಏರಿಕೆಯಾಗಿದೆ.
ಅದೇ ರೀತಿ ಸರ್ಕಾರ ಕೂಡ 2280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇವಿಷ್ಟು ಹಣವನ್ನು ಸರ್ಕಾರ ಮಹಿಳೆಯರನ್ನು ಆರ್ಥಿಕವಾಗಿ ದೃಢಪಡಿಸಬೇಕು ಎನ್ನುವ ಕಾರಣಕ್ಕೆ ಅನುದಾನ ನೀಡುತ್ತಿದೆ, ಹಾಗಾಗಿ ಗೃಹಲಕ್ಷ್ಮಿ ಯೋಜನೆಯ (Gruha lakshmi Yojana) ಅಡಿಯಲ್ಲಿ 2000 ನೇರವಾಗಿ ಗೃಹಿಣಿಯರ ಖಾತೆಗೆ ವರ್ಗಾವಣೆ (Bank Account Money Transfer) ಆಗುತ್ತದೆ.
ಇಷ್ಟು ಜನರಿಗೆ ಇನ್ನೂ ತಲುಪಿಲ್ಲ ಮೊದಲ ಕಂತಿನ ಹಣ?
ಅಧಿಕೃತವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರೇ ಈ ಒಂದು ಅಂಕಿ ಅಂಶವನ್ನು ಬಹಿರಂಗಪಡಿಸಿದ್ದಾರೆ.
ಸಲ್ಲಿಸಿದ್ದು ಆಗಿದೆ ಆದರೆ ಅಂತವರ ಖಾತೆಯಲ್ಲಿ ಸಮಸ್ಯೆಗಳು ಇರುವ ಕಾರಣಕ್ಕೆ ಸುಮಾರು 9,44,155 ಅರ್ಜಿದಾರರಿಗೆ ಮೊದಲ ಕಂತಿನ ಹಣ ಜಮಾ ಹಾಗಿಲ್ಲ (Money Deposit). 1,59,356 ಅರ್ಜಿದಾರರ ಡೆಮೋ ಪರಿಶೀಲನೆ ವಿಫಲವಾಗಿದೆ. ಜೊತೆಗೆ 3082 ಮರಣ ಹೊಂದಿರುವ ಪರಿಣಾಮ ಅಂತವರ ಖಾತೆಗೂ ಹಣ ವರ್ಗಾವಣೆ ಆಗುವುದಿಲ್ಲ.
ಇನ್ನುಳಿದಂತೆ ಹಲವರ ರೇಷನ್ ಕಾರ್ಡ್ (Ration Card) ಹಾಗೂ ಆಧಾರ್ ಕಾರ್ಡ್ ನಲ್ಲಿ (Aadhaar Card) ಹೆಸರು ಮ್ಯಾಚ್ ಆಗುತ್ತಿಲ್ಲ, ಹಾಗೇನೆ ಇನ್ನು ಹಲವರ ಬ್ಯಾಂಕ್ ಖಾತೆ ಆಕ್ಟಿವ್ ಆಗಿಲ್ಲ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವಂತೆ 5,96,268 ಅರ್ಜಿದಾರರ ಆಧಾರ್ ಕಾರ್ಡ್ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ. 1,75,683 ಫಲಾನುಭವಿಗಳ ಹೆಸರು ಹಾಗೂ ವಿಳಾಸದಲ್ಲಿ ವ್ಯತ್ಯಾಸ ಕಂಡುಬಂದಿದೆ.
2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ (Aadhaar link) ಆಗಿದೆ ಹಾಗೂ ಅವರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಇದರ ಜೊತೆಗೆ ಯಾರ ಬ್ಯಾಂಕ್ ಖಾತೆಗೆ (bank account) ಈಕೆ ವೈ ಸಿ (EKYC) ಆಗಿಲ್ಲವೋ ಆ ಕೆಲಸವನ್ನು ಕೂಡ ಮಾಡಲಾಗುತ್ತಿದೆ, ಜೊತೆಗೆ ತಾಂತ್ರಿಕ ಕಾರಣಗಳಿಂದ ರಿಜೆಕ್ಟ್ (reject) ಆಗಿರುವ ಅರ್ಜಿಗಳನ್ನು ಪರಿಶೀಲನೆ (application verification) ಮಾಡಲಾಗುತ್ತಿದೆ ಎಂದು ಸಚಿವೆ ತಿಳಿಸಿದ್ದಾರೆ.
ಸಿಗಲಿದೆ ದಸರಾ ಗಿಫ್ಟ್! (Gift)
2000 ಕೆಲವರಿಗೆ ಸಿಕ್ಕಿದೆ. ಆದರೆ ಮೊದಲನೇ ಕಂತಿನ 2000 ರೂಪಾಯಿ ಇನ್ನೂ ಹಲವರಿಗೆ ಸಿಕ್ಕಿಲ್ಲ. ಆದರೆ ಫಲಾನುಭವಿಗಳು ಚಿಂತೆ ಮಾಡುವ ಅಗತ್ಯವಿಲ್ಲ ಯಾರ ಖಾತೆಗೆ ಇದುವರೆಗೆ ಹಣ ಬಂದಿಲ್ಲವೋ ಅವರ ಖಾತೆ ಸರಿ ಹೋದರೆ ಎರಡು ಸಾವಿರದ ಬದಲು ಎರಡು ಕಂತಿನ ಹಣವನ್ನು ಸೇರಿಸಿ 4000 ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದೇ ಅಕ್ಟೋಬರ್ ಎರಡನೇ ವಾರದಲ್ಲಿ ಎರಡನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲು ಆರಂಭವಾಗುತ್ತದೆ ಈ ಹಿನ್ನೆಲೆಯಲ್ಲಿ ಮೊದಲ ಕಂತಿನ ಹಣ ಬಾರದೆ ಇದ್ದರೂ ಕೂಡ ಎರಡನೇ ಕಂತಿನ ಹಣವು ಸೇರಿ 4,000 ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ, ಈ ದಸರಾ ಹಬ್ಬಕ್ಕೆ ಮಹಿಳೆಯರಿಗೆ ದೊಡ್ಡ ಗಿಫ್ಟ್ ನೀಡಲಿದೆ ಎನ್ನಬಹುದು.