ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ. ಖಂಡನೆ ಮಾಡಿದ ದಲಿತಪರ ಸಂಘಟನೆ... ಬಾಗಲಕೋಟೆ : ಜಿಲ್ಲೆಯ ನೂತನ ತಾಲೂಕು ಕೇಂದ್ರವಾದ ರಬಕವಿ ಬನಹಟ್ಟಿ ...
ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ. ಖಂಡನೆ ಮಾಡಿದ ದಲಿತಪರ ಸಂಘಟನೆ...
ಬಾಗಲಕೋಟೆ : ಜಿಲ್ಲೆಯ ನೂತನ ತಾಲೂಕು ಕೇಂದ್ರವಾದ ರಬಕವಿ ಬನಹಟ್ಟಿ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಮಾರಾಟ ದಂದೆ ಬಲು ಜೋರಾಗಿದೆ ಇದಕ್ಕೆ ಖಡಿವಾನ ಯಾವಾಗ ಎಂದು ನವ ಭಾರತ ಹಿಂದೂ ದಲಿತ ಸಂಘದ ತಾಲೂಕು ಅಧ್ಯಕ್ಷ ಸಂಗಪ್ಪ ಕಟ್ಟಿಮನಿ ಗುಡುಗಿದ್ದಾರೆ . ಈ ಅಕ್ರಮ ದಂದೆಯ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ನೇಕಾರ ನಗರಿ ಎಂದು ಹೆಸರು ಪಡೆದ ರಬಕವಿ ಬನಹಟ್ಟಿ ತಾಲೂಕು ಇದೀಗ ಅಕ್ರಮ ಸಾರಾಯಿ ಮಾರಾಟ ನಗರಿ ಆಗಿ ಬದಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಗ್ರಾಮಗಳಾದ ನಾವಲಗಿ ಬಂಡಿಗಣಿ,ಹಿಪ್ಪರಗಿ,ಸಸಾಲಟ್ಟಿ,ಕಾಲತೀಪ್ಪಿ,ಹೊಸೂರು,ಚಿಮ್ಮಡ ಹೀಗೆ ಮುಂತಾದ ಗ್ರಾಮಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಇವತ್ತು ಸಾರಾಯಿ ಸಿಗುತ್ತಿದೆ. ಇದರಿಂದ ನೂರಾರು ಬಡ ಕುಟುಂಬಗಳು ಬಿದಿಗೆ ಬರುವಂತಾ ಸನ್ನಿವೇಶ ನಿರ್ಮಾಣವಾಗುತ್ತಿದೆ ಅದರಲ್ಲಿಯೂ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ರವರ ತವರು
ಜಿಲ್ಲೆಯಲ್ಲಿ ಇಂತಹ ಅನಧಿಕೃತ ಮಾರಾಟ ದಂದೆಗಳು ನಡೆಯುತ್ತಿರುವದನ್ನ ನೋಡಿದ್ರೆ ಅಧಿಕಾರಿಗಳು ಸಹ ದಂದೇಕೋರರೊಂದಿಗೆ ಕೈ ಜೋಡಿಸಿದ್ದಾರಾ ಅನ್ನೋ ಪ್ರಶ್ನೆ ಕಾಡುತ್ತಿದೆ ಎಂದರು. ಈ ಕುರಿತು ಈಗಾಗಲೆ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಅಕ್ರಮ ದಂದೇಕೋರರ ವಿರುದ್ಧ ಸೂಕ್ತ ಕ್ರಮ ಜರುಗಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ರಬಕವಿ ಬನಹಟ್ಟಿ ತಾಲೂಕಿನಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ವರದಿ: ಪ್ರದೀಪ ದೇಶಪಾಂಡೆ