ಅಪಘಾತಗಳು ಹೆಚ್ಚುತ್ತಿರುವ ಹಿನ್ನಲೆ ಜಾಗೃತಿ ಮುಡಿಸುತ್ತಿರುವ ಎ ಎಸ್ ಐ.. ಬಾಗಲಕೋಟೆ : ಇತ್ತೀಚೆಗೆ ರಸ್ತೆ ಅಪಘಾತಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ...
ಅಪಘಾತಗಳು ಹೆಚ್ಚುತ್ತಿರುವ ಹಿನ್ನಲೆ ಜಾಗೃತಿ ಮುಡಿಸುತ್ತಿರುವ ಎ ಎಸ್ ಐ..
ಬಾಗಲಕೋಟೆ : ಇತ್ತೀಚೆಗೆ ರಸ್ತೆ ಅಪಘಾತಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ ಅತಿಯಾದ ವೇಗ ಕುಡಿದು ವಾಹನ ಚಾಲನೆ ಹೀಗೆ ಹಲವಾರು ರೀತಿಯಲ್ಲಿ ದಿನನಿತ್ಯ ಸಾವಿರಾರು ರಸ್ತೆ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ ಜಾಗೃತವಾಗದ ಸಮಾಜಕ್ಕೆ ಜಾಗೃತಿ ಮುಡಿಸುತ್ತಿರುವ ಎ ಎಸ್ ಐ ಎಂ ಎಲ್ ಜಟ್ಟೆರ್ ಹಾಗೂ ಸಿಬ್ಬಂದಿ
ರಸ್ತೆ ಅಪಘಾತಗಳನ್ನ ತಪ್ಪಿಸಲು ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು ಜನರು ಎಚ್ಚೆತ್ತುಕೊಳ್ಳದೆ ಅಪಘಾತಗಳ ಸಂಖ್ಯೆ ತಗ್ಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿ ಪೊಲೀಸ್ ಔಟ್ ಪೋಸ್ಟ್ ಎ ಎಸ್ ಐ ML ಜೇಟ್ಟರ್ ಹಾಗೂ ಸಿಬ್ಬಂದಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಇತ್ತೀಚೆಗಷ್ಟೇ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದು ಕಬ್ಬು ತುಂಬಿದ ಟ್ರ್ಯಾಕ್ಟರ್ ಲಾರಿ ವಾಹನಗಳು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದು ರಾತ್ರಿ ವೇಳೆಯಲ್ಲಿ ಹಿಬಂದಿ ಸವಾರರಿಗೆ ವಾಹನಗಳು ಕಾಣದೆ ಅಪಘಾತಗಳು ಆಗುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಕುರಿತು ಕಬ್ಬು ತುಂಬಿದ ಟ್ರಾಕ್ಟರ್ ಚಾಲಕರಿಗೆ ಹಿಂಬದಿಯಲ್ಲಿ ಪ್ರತಿಪಲಕಗಳನ್ನು ಅಳವಡಿಸುವಂತೆ ತಿಳಿಹೇಳುತ್ತಿರುವ ದೃಶ್ಯ ರಬಕವಿ ನಗರದಲ್ಲಿ ಕಂಡು ಬಂದಿದೆ ಇನ್ನು ಇವರ ಈ ಜಾಗೃತಿ ಮೂಡಿಸುವ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ವರದಿ : ಪ್ರದೀಪ್ ದೇಶಪಾಂಡೆ