ಬೆಳಗಾವಿ: ಹುಲಿ ಉಗುರು ಧರಿಸಿರುವ ಪ್ರಕರಣದಲ್ಲಿ ಜಿಲ್ಲೆಯ ಪ್ರಭಾವಿ ನಾಯಕ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ಹುಲಿ ಉಗುರಿನ ಪೆಂಡೆಂಟ್ ಧರಿಸಿರ...
ಬೆಳಗಾವಿ: ಹುಲಿ ಉಗುರು ಧರಿಸಿರುವ ಪ್ರಕರಣದಲ್ಲಿ ಜಿಲ್ಲೆಯ ಪ್ರಭಾವಿ ನಾಯಕ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ಈಗ ಬಾರಿ ಸದ್ದು ಮಾಡುತ್ತಿದೆ.
ಶಾಸಕ ಲಕ್ಷ್ಮಣ್ ಸವದಿ ಪುತ್ರ ಸುಮಿತ್ ತನ್ನ ಮದುವೆಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುಮಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಫೋಟೋ ಈಗ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಹುಲಿ ಉಗುರಿನ ಜಾಡು ಬೆನ್ನತ್ತಿರುವ ಅರಣ್ಯಾಧಿಕಾರಿಗಳು ಲಕ್ಷ್ಮಣ್ ಸವದಿ ಮನೆ ಕದ ತಟ್ಟುವ ಸಮಯ ಸಮೀಪದಲ್ಲೇ ಇದೆ ಎಂಬುದು ತನಿಖೆಯ ಗತಿ ನೋಡುವಾಗ ತಿಳಿಯುತ್ತಿದೆ.
ವರ್ತುರು ಸಂತೋಷ್ ಹುಲಿ ಉಗುರು ಧರಿಸಿದ್ದ ಪ್ರಕರಣ ರಾಜ್ಯದೆಲ್ಲೆಡೆ ಸುದ್ಧಿ ಮಾಡುತ್ತಿದ್ದಂತೆ, ಹುಲಿ ಉಗುರು ಧರಿಸಿರುವ ಎಲ್ಲಾ ವ್ಯಕ್ತಿಗಳ ಮೇಲು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ಸಂಸದ ಜಗ್ಗೇಶ್ ಸೇರಿದಂತೆ ಹಲವರ ಮನೆ ಮೇಲೆ ಶೋಧ ಕಾರ್ಯ ನಡೆದಿದೆ. ಈಗ ಅರಣ್ಯಾಧಿಕಾರಿಗಳ ನೆರಳು ರಾಜಕಾರಣಿಗಳ ಬೆನ್ನು ಬಿದ್ದಿದೆ.
ಈ ಪ್ರಕರಣ ಸಂಬಂಧ ಮಾತನಾಡಿರುವ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ, ಕಾನೂನಿಗಿಂತ ಯಾರು ದೊಡ್ಡವರಲ್ಲ, ಕಾನೂನು ಉಲ್ಲಂಘಿಸಿದವರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಾಗಿದ್ದರು ಶಿಕ್ಷೆ ಖಚಿತ ಎಂದು ಹೇಳಿದ್ದಾರೆ.