ರಾಜಾಜಿನಗರ ಪೊಲೀಸ್ ಠಾಣೆ ಮೇಲೆ ರಾತ್ರಿ ಲೋಕಾ ರೇಡ್..! ಠಾಣೆಯಿಂದ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ ಎಸ್ಕೇಪ್..! ಬೆಂಗಳೂರು : ಕಳ್ಳರು ಠಾಣೆಯಿಂದ ಓ...
ರಾಜಾಜಿನಗರ ಪೊಲೀಸ್ ಠಾಣೆ ಮೇಲೆ ರಾತ್ರಿ ಲೋಕಾ ರೇಡ್..! ಠಾಣೆಯಿಂದ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ ಎಸ್ಕೇಪ್..!
ಬೆಂಗಳೂರು : ಕಳ್ಳರು ಠಾಣೆಯಿಂದ ಓಡಿ ಹೋಗಿದ್ದನ್ನು ನೋಡಿದ್ದೇವೆ, ಆದ್ರೆ ಇವತ್ತು ಠಾಣೆಯಿಂದ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್. ಕಾನ್ಸ್ಟೇಬಲ್ಗಳು ಎಲ್ಲರೂ ಓಡಿಹೋಗಿದ್ದಾರೆ. ಎಲ್ಲಿ ಅಂತೀರಾ..? ಈ ಸ್ಟೋರಿ ಓದಿ.. ರಾಜಾಜಿನಗರ ಪೊಲೀಸ್ ಠಾಣೆ ಮೇಲೆ ರಾತ್ರಿ ಲೋಕಾಯುಕ್ತ ರೇಡ್ ನಡೆಸಿದೆ. ಲೋಕಾ ರೇಡ್ ಆಗ್ತಿದ್ದಂತೆ ಎಲ್ಲರೂ ಪರಾರಿಯಾಗಿದ್ದಾರೆ.
ಕೇಸ್ವೊಂದಕ್ಕೆ ಬಿ ರಿಪೋರ್ಟ್ ಹಾಕಲು ಲಂಚ ಕೇಳಿದ್ದ ಬಗ್ಗೆ ಕೇಸ್ ದಾಖಲಾಗಿತ್ತು. ಶ್ರೀಸಾಗರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾ ಯುಕ್ತ ರಾಜಾಜಿನಗರ ಪೊಲೀಸ್ ಠಾಣೆ ಮೇಲೆ ರೇಡ್ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಹೆಡ್ ಕಾನ್ಸ್‌ಟೇಬಲ್ ಆಂಜಿನೇಯ ಸಿಕ್ಕಿಬಿದ್ದಿದ್ದಾರೆ. ಠಾಣಾಧಿಕಾರಿ ಹೆಡ್ಕಾನ್ಸ್ಟೇಬಲ್ ಮೂಲಕ ಹಣ ಪಡೆಯುತ್ತಿದ್ದ, ಹೆಡ್ ಕಾನ್ಸ್‌ಟೇಬಲ್ ಆಂಜಿನೇಯ ಅರೆಸ್ಟ್ ಮಾಡಿ, ಲಂಚದ ಹಣ ಸೀಜ್ ಮಾಡಲಾಗಿದೆ.
ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್, PSI ಮಾರುತಿ ಎಸ್ಕೇಪ್ ಆಗಿದ್ದಾರೆ. ಎಲ್ಲರೂ ಓಡಿ ಹೋಗಿದ್ದರಿಂದ ರಾಜಾಜಿನಗರ ಪೊಲೀಸ್ ಠಾಣೆ ಅನಾಥವಾಗಿದೆ. ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ತಂದರೂ ಕೇಳೋರಿಲ್ಲ, ರಾಜಾಜಿನಗರ ಪೊಲೀಸ್ ಠಾಣೆ ಭ್ರಷ್ಟಾಚಾರದ ಕೊಂಪೆಯಾಗಿತ್ತು. ಹಣದ ಸಮೇತ ರೆಡ್ಹ್ಯಾಂಡ್ ಆಗಿ ಸಿಕ್ಕಿ ಎಲ್ಲರೂ ಪರಾರಿಯಾಗಿದ್ದಾರೆ.