ಬೆಂಗಳೂರು;- ಚೈತ್ರಾ ಕುಂದಾಪುರ ವಂಚನೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಸೂಲಿಬೆಲೆ ಹೆಸರು ಪ್ರಸ್ತಾಪವಾಗಿದೆ. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮ...
ಬೆಂಗಳೂರು;- ಚೈತ್ರಾ ಕುಂದಾಪುರ ವಂಚನೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಸೂಲಿಬೆಲೆ ಹೆಸರು ಪ್ರಸ್ತಾಪವಾಗಿದೆ.
ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಸತ್ಯವನ್ನು ಇದ್ದಾಗ ಹೇಳಿದ್ರೆ ನಮಗೆ ಭಯವಿಲ್ಲ. ನಮ್ಮ ಹೆಸರು ಉಲ್ಲೇಖವಾದಾಗ ಎಲ್ಲಾ ಘಟನೆಯನ್ನು ಹೇಳಬೇಕಾಗುತ್ತದೆ. ಸತ್ಯಜಿತ್ ಸೂರತ್ಕಲ್ ಎಂಬವರು ಫೋನ್ ಮಾಡಿ ಒಂದೂವರೆ ಕೋಟಿ ತೆಗೆದುಕೊಂಡಿದ್ರೆ ಅದನ್ನು ಹಿಂದಿರುಗಿಸಬೇಕು ಎಂದು ಹೇಳಿದಾಗ ನಾನು ಕೋಪಗೊಂಡೆ.
ಕೊಲ್ಲೂರಿನಲ್ಲಿ ಒಮ್ಮೆ ಗೋವಿಂದ ಬಾಬು ಪೂಜಾರಿ ಅವರನ್ನ ಒಮ್ಮೆ ಭೇಟಿಯಾಗಿದ್ದೆ ಎಂದು ಹೇಳಿದಾಗ ಫೋನ್ ಕಟ್ ಮಾಡಿದರು. ಈ ವಿಷಯವನ್ನು ಶರಣ್ ಅವರಿಗೆ ವಿಷಯ ತಿಳಿಸಿದೆ. ಕೆಲ ಸಮಯದ ಬಳಿಕ ಸತ್ಯಜಿತ್ ಸೂರತ್ಕಲ್ ಫೋನ್ ಮಾಡಿ ಅದು ಅಭಿನವ ಹಾಲಶ್ರೀ ಅಂತ ಹೇಳಿದರು.
ಈ ಘಟನೆ ಬಳಿಕ ನಾನು ಚಕ್ರವರ್ತಿ ಸೂಲಿಬೆಲೆ ಅವರಿಗೆ ಫೋನ್ ಮಾಡಿದಾಗ ಎಲ್ಲಾ ವಿಷಯ ಹೇಳಿದೆ. ಅಭಿನವ ಶ್ರೀಗಳು ಯುವ ಬ್ರಿಗೇಡ್ ಜೊತೆ ಗುರುತಿಸಿಕೊಂಡಿದ್ದಾರೆ ಎಂದಾಗ ನಾನು ಸಿ.ಟಿ.ರವಿ ಜೊತೆ ಮಾತಾಡಿದ್ದೇನೆ ಎಂದರುಕೊಲ್ಲೂರಿನಲ್ಲಿ ಒಮ್ಮೆ ಗೋವಿಂದ ಬಾಬು ಪೂಜಾರಿ ಅವರನ್ನ ಒಮ್ಮೆ ಭೇಟಿಯಾಗಿದ್ದೆ ಎಂದು ಹೇಳಿದಾಗ ಫೋನ್ ಕಟ್ ಮಾಡಿದರು. ಈ ವಿಷಯವನ್ನು ಶರಣ್ ಅವರಿಗೆ ವಿಷಯ ತಿಳಿಸಿದೆ. ಕೆಲ ಸಮಯದ ಬಳಿಕ ಸತ್ಯಜಿತ್ ಸೂರತ್ಕಲ್ ಫೋನ್ ಮಾಡಿ ಅದು ಅಭಿನವ ಹಾಲಶ್ರೀ ಅಂತ ಹೇಳಿದರು.
ಈ ಘಟನೆ ಬಳಿಕ ನಾನು ಚಕ್ರವರ್ತಿ ಸೂಲಿಬೆಲೆ ಅವರಿಗೆ ಫೋನ್ ಮಾಡಿದಾಗ ಎಲ್ಲಾ ವಿಷಯ ಹೇಳಿದೆ. ಅಭಿನವ ಶ್ರೀಗಳು ಯುವ ಬ್ರಿಗೇಡ್ ಜೊತೆ ಗುರುತಿಸಿಕೊಂಡಿದ್ದಾರೆ ಎಂದಾಗ ನಾನು ಸಿ.ಟಿ.ರವಿ ಜೊತೆ ಮಾತಾಡಿದ್ದೇನೆ ಎಂದರು.
ತದನಂತರ ಚೈತ್ರಾ ಕುಂದಾಪುರ ಅವರಿಗೆ ನೇರವಾಗಿ ಫೋನ್ ಮಾಡಿದಾಗ ಆಕೆ ಎಲ್ಲಾ ಆರೋಪಗಳನ್ನು ಎಲ್ಲಾ ತಳ್ಳಿ ಹಾಕಿದಳು. ಚೈತ್ರಾ ಕುಂದಾಪುರ ಮತ್ತು ಅಭಿನವ ಹಾಲಶ್ರೀಗೆ ಒಳ್ಳೆಯ ಸಂಪರ್ಕ ಇದೆ ಅಂತ ತಿಳಿತು. ನಂತರ ಗಗನ್ ಬಗ್ಗೆಯೂ ವಿಷಯ ಗೊತ್ತಾದಾಗ ಬಿಜೆಪಿ ವರಿಷ್ಠರ ಗಮನಕ್ಕೂ ತರಲಾಯ್ತು ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಶ್ರೀಗಳು ಹೇಳಿದ್ದಾರೆ.