ಅನ್ನಭಾಗ್ಯ ಯೋಜನೆಯಲ್ಲಿ ಟ್ವಿಸ್ಟ್ ಕೊಟ್ಟ ಸರ್ಕಾರ; ಇನ್ನು ಮುಂದೆ ನೇರ ಹಣ ವರ್ಗಾವಣೆ ಇಲ್ಲ! ಯಾವಾಗಿನಿಂದ ಅಕ್ಕಿಯ ಹಣ ಬರುವುದು ಸ್ಟಾಪ್ ಆಗುತ್ತೆ ಎನ್ನುವ...
ಅನ್ನಭಾಗ್ಯ ಯೋಜನೆಯಲ್ಲಿ ಟ್ವಿಸ್ಟ್ ಕೊಟ್ಟ ಸರ್ಕಾರ; ಇನ್ನು ಮುಂದೆ ನೇರ ಹಣ ವರ್ಗಾವಣೆ ಇಲ್ಲ!
ಯಾವಾಗಿನಿಂದ ಅಕ್ಕಿಯ ಹಣ ಬರುವುದು ಸ್ಟಾಪ್ ಆಗುತ್ತೆ ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಫಲಾನುಭವಿಗಳಿಗೆ ಅಗತ್ಯವಿರುವ ಪಡಿತರ ನೀಡಿದರೆ ಹೆಚ್ಚು ಪ್ರಯೋಜನವಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ.
ಅನ್ನಭಾಗ್ಯ ಯೋಜನೆ ಆರಂಭವಾದಾಗಿನಿಂದ ಬಡತನ ರೇಖೆಗಿಂತ ಕೆಳಗಿನವರಿಗೆ (Below poverty line) ಉಚಿತವಾಗಿ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು (Free rice) ನೀಡುತ್ತಿದೆ. ಇದರಿಂದ ಸಾಕಷ್ಟು ಫಲಾನುಭವಿಗಳಿಗೆ ಪ್ರಯೋಜನ ಕೂಡ ಆಗಿದೆ
ಇನ್ನು ರಾಜ್ಯ ಸರ್ಕಾರ (State government) ಕೇಂದ್ರ ಸರ್ಕಾರ ಕೊಡುತ್ತಿರುವ ಉಚಿತ 5 ಕೆಜಿ ಅಕ್ಕಿಯ ಜೊತೆಗೆ ತಾವು ಐದು ಕೆಜಿ ಸೇರಿಸಿ ಒಟ್ಟು ಕೆಜಿ ಉಚಿತ ಅಕ್ಕಿಯನ್ನು ಜನರಿಗೆ ನೀಡುವುದಾಗಿ ಹೇಳಿತ್ತು. ಆದರೆ ರಾಜ್ಯಕ್ಕೆ ಬೇಕಾಗುವಷ್ಟು, ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದೆ ಇರುವುದರಿಂದ ಜನರಿಗೆ 34 ರೂಪಾಯಿಗಳನ್ನು ಪ್ರತಿ ಕೆಜಿಗೆ ಸರ್ಕಾರ ನೀಡುತ್ತಿದೆ.
ಬೆಳ್ಳಂಬೆಳಿಗ್ಗೆ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್! ಸರ್ಕಾರದ ಮಹತ್ವದ ನಿರ್ಧಾರ ಏನು ಗೊತ್ತಾ?
ಇನ್ನು ಮುಂದೆ ಇರುವುದಿಲ್ಲ ಅನ್ನ ಭಾಗ್ಯದ ಹಣ!
ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಅನ್ನಭಾಗ್ಯ (Annabhagya scheme) ಯೋಜನೆಯ ಪ್ರಯೋಜನ ಸಿಗುತ್ತಿದೆ ಇವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತಿತ್ತು. ಇದರ ಜೊತೆಗೆ ರಾಜ್ಯ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ 170 ರೂಪಾಯಿಗಳನ್ನು ಅವರ ಖಾತೆಗೆ (Bank Account) ನೇರವಾಗಿ ವರ್ಗಾವಣೆ (DBT) ಮಾಡುತ್ತಿತ್ತು.
ಹೀಗೆ ನೇರವಾಗಿ ಹಣವನ್ನು ಕೊಡುವ ಪ್ರಕ್ರಿಯೆ ಕಳೆದ ಮೂರು ತಿಂಗಳ ಹಿಂದೆ ಆರಂಭವಾಗಿದೆ. ಈಗಾಗಲೇ ಮೂರು ಕಂತಿನ ಅನ್ನ ಭಾಗ್ಯ ಯೋಜನೆಯ ಹಣ ಕೂಡ ಬಿಡುಗಡೆ ಆಗಿದೆ.
ಜನರಿಗೆ ಬೇಕಾಗಿರುವುದು ಅಕ್ಕಿ ಅಥವಾ ಪೌಷ್ಟಿಕ ಆಹಾರ, ಅದರ ಬದಲು ಸರ್ಕಾರ ಹೀಗೆ ಹಣ ಕೊಡುವುದು ಹೆಚ್ಚು ಸಮಂಜಸವಲ್ಲ ಎಂಬುದು ಹಲವರ ಅಭಿಪ್ರಾಯ.
ಅನ್ನಭಾಗ್ಯ 3ನೇ ಕಂತಿನ ಹಣ ಇಂತಹವರ ಬ್ಯಾಂಕ್ ಖಾತೆಗೆ ಜಮಾ ಆಗೋಲ್ಲ! ಕಾರಣ ಕೊಟ್ಟ ಸರ್ಕಾರ
ಅಕ್ಕಿ ಹಣ ಸ್ಟಾಪ್ ಆಗಲಿದೆಯಾ?
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅಕ್ಕಿಯನ್ನು ನೀಡಬೇಕು. ಇದರಿಂದ ಅವರಿಗೆ ಆಹಾರದ ಸಮಸ್ಯೆ ಉಂಟಾಗುವುದಿಲ್ಲ ಇನ್ನು ಅಕ್ಕಿ ಒದಗಿಸಲು ಸಾಧ್ಯವಾಗದೆ ಇದ್ದರೆ ಹಣ ನೀಡುವ ಬದಲು ಪೌಷ್ಟಿಕ ಆಹಾರವನ್ನಾದರೂ (Nutritious food) ನೀಡಬೇಕು ಎಂದು ಸಚಿವ ಎನ್. ಚೆಲುವರಾಯ ಸ್ವಾಮಿ ಮನವಿ ಮಾಡಿದ್ದಾರೆ.
ಅಕ್ಕಿಯ ಬದಲು ಹಣ ನೀಡುವುದಕ್ಕಿಂತ ಪೌಷ್ಟಿಕ ಆಹಾರಗಳನ್ನು ನೀಡಬೇಕು ಎಂಬುದಾಗಿ ಸಚಿವರು ವಿಧಾನಸೌಧದಲ್ಲಿ ಮನವಿ ಮಾಡಿದ್ದಾರೆ.
ಅಕ್ಕಿ ಕೊಡಲು ಸಾಧ್ಯವಾಗದೇ ಇರುವ ಪಕ್ಷದಲ್ಲಿ ರಾಗಿ, ಜೋಳ, ಕಡಲೆಕಾಯಿ ಎಣ್ಣೆ ಮೊದಲದ ಪೌಷ್ಟಿಕ ಆಹಾರವನ್ನು ನೀಡುವುದರ ಬಗ್ಗೆ ಚಿಂತನೆ ನಡೆಸಲಾಗಿದೆ. ದುಡ್ಡು ಕೊಡುವುದಕ್ಕಿಂತ ಜನರಿಗೆ ಪೌಷ್ಟಿಕ ಆಹಾರಗಳನ್ನು ಕೊಟ್ಟರೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಸರ್ಕಾರ ಯೋಚಿಸಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಹಣದ ಬದಲು ಪೌಷ್ಟಿಕ ಆಹಾರಗಳನ್ನೇ ಜನರಿಗೆ ನೀಡುವ ಸಾಧ್ಯತೆ ಇದೆ.
ಈ ಬಗ್ಗೆ ಸರ್ಕಾರ ಇನ್ನು ಸ್ಪಷ್ಟನೆ ನೀಡಿಲ್ಲ. ಯಾವಾಗಿನಿಂದ ಅಕ್ಕಿಯ ಹಣ ಬರುವುದು ಸ್ಟಾಪ್ ಆಗುತ್ತೆ ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಫಲಾನುಭವಿಗಳಿಗೆ ಅಗತ್ಯವಿರುವ ಪಡಿತರ ನೀಡಿದರೆ ಹೆಚ್ಚು ಪ್ರಯೋಜನವಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ.