ಬೆಂಗಳೂರು;- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಗೆ ಹೀಗಾಗಲೇ 2000 ಸಾವಿರ ಹಣವನ್ನು ಅರ್ಜಿ ಸಲ್ಲಿಸಿದ ಫಲಾನುಭವಿಗಳ ಖಾತೆಗೆ ಜಮೆ ಮಾ...
ಬೆಂಗಳೂರು;- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಗೆ ಹೀಗಾಗಲೇ 2000 ಸಾವಿರ ಹಣವನ್ನು ಅರ್ಜಿ ಸಲ್ಲಿಸಿದ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಆದರೆ ಸಾಕಷ್ಟು ಮಂದಿಗೆ ಇನ್ನೂ ಕೂಡ ಜಮೆ ಆಗಿಲ್ಲ.
ನಮ್ಮೊಂದಿಗೆ ಅರ್ಜಿ ಸಲ್ಲಿಕೆ ಮಾಡಿದ ಮಹಿಳೆಯರಿಗೆ ಹಣ ಬಂದಿದೆ, ಆದರೆ ನಮಗೆ ಇನ್ನೂ 2000 ಸಾವಿರ ರೂಪಾಯಿ ಬಂದಿಲ್ಲ. ಅರ್ಜಿ ಕೂಡ ಸ್ವೀಕೃತ ಅಂತ ತೆಗೆದುಕೊಂಡಿದೆ, ಯೋಜನೆ ಉದ್ಘಾಟನೆ ಆದ ವೇಳೆ ಮೆಸೇಜ್ ಕೂಡ ಬಂದಿದೆ. ಇಷ್ಟ ಆದರೂ ನಮಗೆ ಯಾಕೆ ಬಂದಿಲ್ಲ ಅಂತ ಶೇಕಡಾ 50ರಷ್ಟು ಮಂದಿ ಕೇಳ್ತಿದ್ದಾರೆ.
Demo
ಹಾಗಾದರೆ ಯಾಕೆ ಡಿಬಿಟಿ ಹಣ, ಅಂದರೇ ಪ್ರತಿ ತಿಂಗಳು 2000 ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣ ತಡವಾಗುತ್ತಿದೆ ಎಂಬ ಪ್ರಶ್ನೆ ಸೇರಿದಂತೆ ಇದುವರೆಗೂ ಯೋಜನೆಗೆ ಅರ್ಜಿ ಎಷ್ಟು ಮಂದಿ ಸಲ್ಲಿಕೆ ಮಾಡಿದ್ದಾರೆ? ಅರ್ಜಿ ಸಲ್ಲಿಸಿದವರಿಗೆ ಎಷ್ಟು ಮಂದಿಗೆ ಹಣ ಸಂದಾಯ ಆಗಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ನಾವು ಕೊಡ್ತೀವಿ, ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಯೋಜನೆ ಒಂದು ಕೋಟಿ 28 ಲಕ್ಷ ಮಂದಿಯಷ್ಟು ಫಲಾನುಭವಿಗಳು ಇದ್ದಾರೆ. ಇಷ್ಟು ಮಂದಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡಲು ಎರಡು ತಿಂಗಳಿಗೆ ಆಗುಷ್ಟು ಹಣವನ್ನು ಸರ್ಕಾರ ಈಗಾಗಲೇ ನೀಡಿದೆ. ಪ್ರತಿ ತಿಂಗಳಿಗೆ 2,100 ಕೋಟಿ ರೂಪಾಯಿ ಹಣ ಗೃಹಲಕ್ಷ್ಮಿ ಯೋಜನೆಗೆ ಬೇಕಿದೆ.
ಇಲ್ಲಿವರೆಗೂ ಒಂದು ಕೋಟಿ 10 ಲಕ್ಷ ಮಂದಿ ಆಗಸ್ಟ್ 30ರ ವೇಳೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ 82 ಲಕ್ಷ ಮನೆಯೊಡತಿಯರಿಗೆ 2 ಸಾವಿರ ರೂಪಾಯಿ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ.
ಉಳಿದಂತೆ 28 ಲಕ್ಷ ಮಂದಿಗೆ ಇನ್ನು ಕೂಡ 2 ಸಾವಿರ ರೂಪಾಯಿ ಹಣ ಬಂದಿಲ್ಲ. ಅಂದರೆ ಶೇಕಡಾ 30 ರಷ್ಟು ಮಂದಿಗೆ ಹಣ ಬರಬೇಕಿದೆ. ಯಾಕೆ ತಡವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೇಳಿದರೆ, ಪ್ರತಿ ದಿನ 6-8 ಲಕ್ಷ ಮನೆಯೊಡತಿಯರ ಖಾತೆಗೆ ಅಷ್ಟೇ ಹಣ ಹಾಕಲು ಆಗುತ್ತದೆ. ಆರ್ಬಿಐ ನಿಯಮಗಳ ಅನ್ವಯ ಹಣ ಹಾಕಬೇಕಾಗಿರುವುರಿಂದ ತಡವಾಗುತ್ತಿದೆ. ಮೊದಲ ಬಾರಿಗೆ ಡಿಬಿಟಿ ಹಣವನ್ನು ಹಾಕುವ ಸಂದರ್ಭದಲ್ಲಿ ತಡವಾಗಲಿದೆ. ಪ್ರತಿಯೊಂದು ಅರ್ಜಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿದೆ. ಎಲ್ಲವೂ ಸರಿ ಇದ್ದರೆ ಮಾತ್ರ ಹಣ ವರ್ಗಾವಣೆ ಮಾಡಲು ಸುಲಭ ಆಗಲಿದೆ.
2000 ಸಾವಿರ ರೂಪಾಯಿ ಹಣ ನಮ್ಮ ಖಾತೆಗೆ ಬರಲು ಇನ್ನೆಷ್ಟು ದಿನಗಳ ಬೇಕು ಅಂತ ನೀವು ಪ್ರಶ್ನೆ ಮಾಡ್ತಿದ್ದರೆ, ಪ್ರತಿ ದಿನಗಳ 6-7 ಲಕ್ಷ ಜನರಿಗೆ ಅಂತ ನೋಡಿದರೆ ಇನ್ನೂ 10 ರಿಂದ 12 ದಿನಗಳ ಸಮಯ ಬೇಕಾಗುತ್ತದೆ. ಅಂದರೆ ಈ ತಿಂಗಳ ಅಂತ್ಯದ ವೇಳೆಗೆ ಮನೆಯೊಡತಿಯ ಖಾತೆಗೆ ಹಣ ಸಂದಾಯ ಆಗಲಿದೆ.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ತಲಾ ಎರಡು ಸಾವಿರ ಹಣ ಇನ್ನೂ ಹೋಗಿಲ್ಲ. ಅರ್ಜಿ ಹಾಕಿದ 1.13 ಕೋಟಿ ಮನೆಯೊಡತಿಯರಲ್ಲಿ 82 ಲಕ್ಷ ಅರ್ಜಿದಾರರಿಗೆ ಹಣ ವರ್ಗಾವಣೆ ಆಗಿದೆ. ಇನ್ನುಳಿದ 28 ಲಕ್ಷ ಅರ್ಜಿದಾರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಬೇಕಿದೆ. ಇದರಲ್ಲಿ 8 ಲಕ್ಷ ಮನೆಯೊಡತಿಯರಿಗೆ ಈ ತಿಂಗಳು ಹಣ ವರ್ಗಾವಣೆ ಆಗೋದು ಡೌಟು ಎನ್ನಲಾಗಿದೆ.
8 ಲಕ್ಷ ಮಂದಿಗೆ ಹಣ ವರ್ಗಾವಣೆ ಯಾಕೆ ಹೋಗುವುದು ಡೌಟ್ ಅಂತ ನೋಡುವುದಾದರೆ, 41 ಸಾವಿರ ಮನೆಯೊಡತಿಯರ ಹೆಸರಿನ ಇನ್ಶಿಯಲ್ ಆಧಾರ್ ಕಾರ್ಡ್ನಲ್ಲಿ ಒಂದು ರೀತಿ, ರೇಷನ್ ಕಾರ್ಡ್ನಲ್ಲಿ ಒಂದು ರೀತಿ ಇದೆ. ಇನ್ನು ಫೋಟೋ ಇಮೇಜ್ ಆಧಾರ್ ಕಾರ್ಡ್ನಲ್ಲಿ ಒಂದು ರೀತಿ ಇದ್ದರೆ, ಬ್ಯಾಂಕ್ ಪಾಸ್ಬುಕ್ನಲ್ಲಿ ಒಂದು ರೀತಿ ಇದೆ. ಈ ಸಮಸ್ಯೆಯಿಂದ ಬ್ಯಾಂಕ್ಗೆ ದುಡ್ಡು ಹೋದರೂ ಅವರ ಖಾತೆಗೆ ಹಣ ಜಮಾ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಇ ವೇರಿಫಿಕೇಷನ್ ಸಮಸ್ಯೆ ಅಂತ ಕರೆಯಲಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.