ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಹಣ ಯಾವಾಗ ಜಮೆ ಆಗುತ್ತೆ? ಮೊದಲನೇ ಕಂತಿನ ಹಣವೇ ಬಂದಿಲ್ಲ ಅನ್ನೋರು ಏನ್ ಮಾಡಬೇಕು? ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆ...
ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಹಣ ಯಾವಾಗ ಜಮೆ ಆಗುತ್ತೆ? ಮೊದಲನೇ ಕಂತಿನ ಹಣವೇ ಬಂದಿಲ್ಲ ಅನ್ನೋರು ಏನ್ ಮಾಡಬೇಕು?
ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಬೆಂಬಲಿಸಲು ಮತ್ತು ರಾಜ್ಯದ, ನಗರ ಹಾಗೂ ಬಡ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಪ್ರವೇಶವನ್ನು ನೀಡುವ ಉದ್ದೇಶದಿಂದ ಪ್ರಗತಿಪರ ಮತ್ತು ಸಬಲೀಕರಣ ಕಾರ್ಯಕ್ರಮವಾದ ಗೃಹ ಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಿದೆ. ವಸತಿ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಮಹಿಳೆಯರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯೊಂದಿಗೆ, ಸಮಾನ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಯೋಜನೆಯು ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಮುಂದುವರೆಸುತ್ತಾ, ಅಸಂಖ್ಯಾತ ಕುಟುಂಬಗಳ ಜೀವನವನ್ನು ಉತ್ತಮವಾಗಿ ಬದಲಾಯಿಸುವುದರಿಂದ ಪ್ರತಿ ತಿಂಗಳು ಮಹಿಳೆಯರಿಗೆ 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆ ಆರಂಭವಾಗಿದ್ದು, ಸರ್ಕಾರ ಯಜಮಾನಿಯರ ಖಾತೆಗೆ ಹಣ ಜಮಾ ಮಾಡುತ್ತಿದೆ.
ಕೆಲವರ ಖಾತೆಗೆ ಹಣ ಜಮಾ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕೆಲವು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಕೆಲವರು ನಮಗೆ SMS ಬಂದಿಲ್ಲ ಹೀಗಾಗಿ ನಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೋ ಅಥವಾ ತಡೆಹಿಡಿಯಲಾಗಿದೆಯೋ ಅಥವಾ ರದ್ದಾಗಿದೆಯೋ ಎನ್ನುವ ಗೊಂದಲದಲ್ಲಿ ಇದ್ದಾರೆ. ಆದ್ರೆ ಮೊದಲ ಕಂತಿನ ಹಣ ಪಡೆದವರು 2ನೇ ಕಂತಿನ ಹಣ ಯಾವಾಗ ಬರಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಹಾಗಾದ್ರೆ 2ನೇ ಕಂತಿನ ಹಣ ಯಾವಾಗ ಬರುತ್ತೆ? ಮೊದಲ ಕಂತಿನ ಹಣವೇ ಇನ್ನು ಬಂದಿಲ್ಲ ಅನ್ನೋರು ಏನ್ ಮಾಡಬೇಕು ನೋಡೋಣ ಬನ್ನಿ.
ಹೌದು ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣಕ್ಕಾಗಿ ಇದೀಗ ಗೃಹ ಲಕ್ಷ್ಮಿಯರು ಕಾಯ್ತಾ ಇದ್ದಾರೆ ಅಂತ ಹೇಳಬಹುದು ಇದೀಗಾಗಲೇ ಮೊದಲನೇ ಕಂತಿನ ಹಣವು ಸಾಕಷ್ಟು ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದ್ರೆ ಇನ್ನು ಹಲವರಿಗೆ ಹಣ ಬಂದಿಲ್ಲ ಇದರಿಂದ ಕೆಲ ಮಹಿಳೆಯರು ಆತಂಕದಲ್ಲಿದ್ದು ನಂಬಿಕೆ ಹಣ ಬರುತ್ತೋ ಇಲ್ವೋ ಅನ್ನೋ ಗೊಂದಲದಲ್ಲಿದ್ದಾರೆ. ಆದ್ರೆ ಇದೀಗ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಯಾರು ಖಾತೆಗೆ ಇನ್ನು ಹಣ ಬಂದಿಲ್ವೋ ಅಂತವರ ಖಾತೆಗೆ ಮೊದಲ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣವು ಕೂಡ ಅತಿ ಶೀಘ್ರದಲ್ಲಿಯೇ ಜಮೆ ಮಾಡಲಾಗುತ್ತೆ ಅನ್ನೋ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಈಗಾಗಲೇ 1.10 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ 63 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಈಗಾಗಲೇ ಹಣ ಜಮೆಯಾಗಿದೆ. ಆದ್ರೆ ಇನ್ನೂ 47 ಲಕ್ಷ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಇನ್ನುಳಿದ ಮಹಿಳೆಯರ ಖಾತೆಗೆ ಹಣ ಜಮಾವಣೆ ಕಾರ್ಯ ಪ್ರಗತಿಯಲ್ಲಿದ್ದು ಪ್ರಕ್ರಿಯೆ ಆರಂಭಗೊಂಡಿದ್ದು ವಾರದ ಒಳಗಾಗಿ ಮಹಿಳೆಯರ ಖಾತೆಗೆ ಹಣ ಜಮಾವಣಿ ಆಗ್ತದೆ ಅಂತ ಸಚಿವರು ಹೇಳಿದ್ದಾರೆ. ಇನ್ನು ಎರಡನೇ ಕಂತಿನ ಹಣ ಯಾವಾಗ ಬರುತ್ತೆ ಅಂತ ಮಹಿಳೆಯರು ಬಹಳ ಕಾತುರದಿಂದ ಕಾಯ್ತಾ ಇದ್ದಾರೆ ಅದಕ್ಕೂ ಕೂಡ ಇದೀಗ ಉತ್ತರ ಸಿಕ್ಕಿದ್ದು ಇದೇ ತಿಂಗಳಲ್ಲಿ ಎರಡನೇ ಕಂತಿನ ಹಣ ಕೂಡ ಜಮಾವಣಿ ಆಗಲಿದೆ.
ಫಲಾನುಭವಿಗಳ ಖಾತೆಗೆ ಹಣ ಯಾವಾಗ ಜಮೆ ಆಗುತ್ತೆ ಗೊತ್ತಾ?
ಅರ್ಜಿ ಸಲ್ಲಿಕೆಗೆ ಹಾಗೂ ಹಣ ವರ್ಗಾವಣೆ ಮಾಡಲಿಕ್ಕೆ ಒಂದೇ ವೆಬ್ಸೈಟ್ ಇರೋದ್ರಿಂದ ಹಣ ವರ್ಗಾವಣೆ ಮಾಡೋದ್ರಲ್ಲಿ ತಡವಾಗಿದೆ ಆದರೆ ಈ ತಿಂಗಳಿನಿಂದ ಹೀಗಾಗುವುದಿಲ್ಲ ತಿಂಗಳ 15ನೇ ತಾರೀಕಿನ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮಾವಣಿ ಮಾಡಲಾಗುವುದು ಅಂತ ಸಚಿವರು ತಿಳಿಸಿದ್ದಾರೆ. ಇನ್ನು ಮೊದಲ ಕಂತಿನ ಹಣ ಬರದೇ ಇರುವವರ ಬ್ಯಾಂಕ್ ಅಥವಾ ಆಧಾರ್ ಸೀಡಿಂಗ್ ಸಮಸ್ಯೆ ಆಗಿದ್ದು 4-5 ದಿನಗಳಲ್ಲಿ ಸಮಸ್ಯೆ ಸರಿ ಪಡಿಸಿ ಖಾತೆಗೆ ಹಣ ಹಾಕಲಾಗುವುದು ಅಂತ ಹೇಳಿದ್ದಾರೆ. ಈಗಾಗಿಯೂ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಅಂಗನವಾಡಿ ಕಾರ್ಯಕರ್ತೆ ಬಳಿ ಸಮಸ್ಯೆಗಳನ್ನು ಬಗ್ಗೆ ಹೇಳಿಕೊಂಡು ವಿವರ ಕೊಟ್ಟರೆ ಅಂತ ಫಲಾನುಭವಿ ಖಾತೆಗೆ ಹಣ ಜಮೆ ಮಾಡೋದಾಗಿ ತಿಳಿಸಿದ್ದಾರೆ. ಹೌದು ತಿಂಗಳ 15-16ನೇ ತಾರೀಖಿನೊಂದು ಮೊದಲ ಕಂತಿನ ಹಣದ ಜೊತೆಗೆ 2ನೇ ಕಂತಿನ ಹಣವನ್ನು ಸಹ ಜಮೆ ಮಾಡುತ್ತೇವೆ ಅಂತ ಸಚಿವರು ತಿಳಿಸಿದ್ದಾರೆ.