ಕಲ್ಬುರ್ಗಿ ;- ಪ್ರಧಾನಿ ವಚನಭ್ರಷ್ಟರಾಗಲು ಸಾಧ್ಯನಾ ಎಂದು ಹೇಳುವ ವಿರುದ್ಧ ಮೋದಿ ವಿರುದ್ಧ ಖರ್ಗೆ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಬೇರೆ...
ಕಲ್ಬುರ್ಗಿ ;- ಪ್ರಧಾನಿ ವಚನಭ್ರಷ್ಟರಾಗಲು ಸಾಧ್ಯನಾ ಎಂದು ಹೇಳುವ ವಿರುದ್ಧ ಮೋದಿ ವಿರುದ್ಧ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬೇರೆಯವರ ರೀತಿ ನಾವು ಬೋಗಸ್ ಭರವಸೆ ಕೊಡುವುದಿಲ್ಲ, ನುಡಿದಂತೆ ನಡೆಯುವ ಸರ್ಕಾರವೇ ಕಾಂಗ್ರೆಸ್ ಸರ್ಕಾರ. ಈ ಹಿಂದೆ ಪ್ರಧಾನಿ ಮೋದಿಯವರು ನಾನು ಅಧಿಕಾರಿಕ್ಕೆ ಬಂದ ಮೇಲೆ ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿ ಕೊಡುತ್ತೇನೆ 15 ಲಕ್ಷ ರೂಪಾಯಿ ಕೊಡುತ್ತೇನೆ ಅಂತ ಭರವಸೆ ಕೊಟ್ಟಿದ್ದರು.
ದೇಶದ ಪ್ರಧಾನಮಂತ್ರಿ ವಚನ ಭ್ರಷ್ಟರಾಗಲು ಸಾಧ್ಯನಾ? ಪಾಪ ಕೊಟ್ಟಿರಬೇಕು, ನೀವು ತಗೊಂಡು ಸುಳ್ಳು ಹೇಳ್ತಾ ಇದ್ದೀರಿ ಅಂತ ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯ ಎನ್ವಿ ಮೈದಾನದಲ್ಲಿ ಆಯೋಜಿಸಿದ್ದ ಗೃಹಜ್ಯೋತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಭರವಸೆಯನ್ನು ಮೋದಿ ಕೊಟ್ಟಿದ್ದರು. ಆದ್ರೆ ಮರೆತರು ಎಂದು ಹರಿಹಾಯ್ದರು.