ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದೇ ಹೇಳಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ಎಂದರೆ ಅವರು ತಮ್ಮ ಅಧಿಕಾರದ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಕೇಳಿ, ಅವ...
ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದೇ ಹೇಳಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ಎಂದರೆ ಅವರು ತಮ್ಮ ಅಧಿಕಾರದ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಕೇಳಿ, ಅವರ ಸಮಸ್ಯೆಗಳನ್ನು ಪರಿಹರಿಸಬೇಕಾಗಿರುವುದು ಅವರ ಕರ್ತವ್ಯ ಕೂಡಾ. ಆದರೆ ಇಂದು ಪರಿಸ್ಥಿತಿ ವಿಭಿನ್ನವಾಗಿದೆ. ಎಲ್ಲೆಡೆ ಭ್ರಷ್ಟಾಚಾರ ಎನ್ನುವುದು ತಾಂಡವವಾಡುತ್ತಿದೆ. ಸಮಸ್ಯೆಗಳು ಎಂಬುದು ಜನರನ್ನು ಕಿತ್ತು ತಿನ್ನುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಲಂಚ ಇಲ್ಲದೇ ಏನೂ ಕೆಲಸ ಮಾಡುವುದೇ ಇಲ್ಲವೇನೋ ಎನ್ನುವಂತೆ ಇದೆ ಇಂದಿನ ನಮ್ಮ ದೇಶದ ಪರಿಸ್ಥಿತಿ. ಬಡವನಿಗೆ ಅವನಿಗೆ ಸಿಗಬೇಕಾದ ಸವಲತ್ತುಗಳು ಸಿಗಬೇಕೆಂದರೂ ಲಂಚ ಬೇಕೇಬೇಕು. ಜಿಗಣೆಗಳಂತಹ ಭ್ರಷ್ಟ ಅಧಿಕಾರಿಗಳು ಜನರ ರಕ್ತವನ್ನು ಹೀರುತ್ತಿದ್ದಾರೆ ನಮ್ಮ ದೇಶದಲ್ಲಿ.
ಆದರೆ ಆಗಾಗ ನಡೆಯುವ ಐಟಿ ಧಾಳಿಗಳು, ಬೇರೆ ಬೇರೆ ಭ್ರಷ್ಟಾಚಾರ ನಿಗ್ರಹ ದಳಗಳು ನಡೆಸುವ ರಹಸ್ಯ ಕಾರ್ಯಾಚರಣೆಗಳ ಪರಿಣಾಮವಾಗಿ ನಮಗೆ ಲಂಚ ಕೋರರ ಮತ್ತು ಭ್ರಷ್ಟರ ಬಂಡವಾಳ ಜನರ ಕಣ್ಮುಂದೆ ಬರುತ್ತದೆ.
ಹೀಗೆ ಲಂಚವನ್ನು ಪಡೆದು ಕೋಟಿ ಕೋಟಿ ಗಳಿಸುತ್ತಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಭ್ರಷ್ಟ ಮುಖವನ್ನು ಸಮಾಜದ ಮುಂದೆ ಇರಿಸಿದೆ ಎಸಿಬಿ. ಹೈದರಾಬಾದ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಒಂದಲ್ಲಾ ಎರಡಲ್ಲಾ, ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿಗಳ ಲಂಚವನ್ನು ಸ್ವೀಕಾರ ಮಾಡುತ್ತಿದ್ದ ಒಬ್ಬ ಭ್ರಷ್ಟ ವಿಭಾಗೀಯ ಕಂದಾಯ ಅಧಿಕಾರಿಯನ್ನು (ತಹಸೀಲ್ದಾರ್) ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಅಧಿಕಾರಿಯ ಹೆಸರು ಬಾಲರಾಜು. ಅವರನ್ನು ಈಗಾಗಲೇ ಲಂಚ ಸ್ವೀಕಾರ ಮಾಡಿರುವ ಆರೋಪದಡಿಯಲ್ಲಿ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ತಹಸೀಲ್ದಾರ್ ಸ್ಥಾನದಲ್ಲಿರುವ ಸರ್ಕಾರಿ ಅಧಿಕಾರಿಯು ಸುಮಾರು 28 ಎಕರೆ ಭೂಮಿಗೆ ಸಂಬಂಧಿಸಿದಂತೆ ದೊಡ್ಡ ಮೊತ್ತದಲ್ಲಿ ಲಂಚವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಎಸಿಬಿ ಶುಕ್ರವಾರ ರಾತ್ರಿ ತಹಶೀಲ್ದಾರ್ ಬಾಲರಾಜು ನಾಗರಾಜು ಅವರ ಮನೆಯ ಮೇಲೆ ಧಾಳಿ ನಡೆಸಿದಾಗ ಅಧಿಕಾರಿಯು ಲಂಚದ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ದಾಳಿಯಲ್ಲಿ ತಹಶಿಲ್ದಾರ್ ಮಾತ್ರವಲ್ಲದೇ ಎಸಿಬಿ ಅಧಿಕಾರಿಗಳು ಗ್ರಾಮ ಕಂದಾಯ ಅಧಿಕಾರಿಯಾದಂತಹ(ವಿಆರ್‌ಒ) ಬಿ.ಸಾಯಿರಾಜ್ ಎನ್ನುವವರನ್ನು ಕೂಡಾ ಬಂಧಿಸಿದ್ದಾರೆ. ಅವರನ್ನು ಮಲ್ಕಂಗಿರಿ ಜಿಲ್ಲೆಯ ವಿಭಾಗೀಯ ಪ್ರಧಾನ ಕಛೇರಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಲಂಚವಾಗಿ ತಹಸೀಲ್ದಾರು ಪಡೆದಿರುವ ಹಣವನ್ನು ಎಣಿಸಿದಾಗ ಅಲ್ಲಿದ್ದ ಭಾರೀ ಮೊತ್ತವನ್ನು ಕಂಡು ಅವರು ದಿಗ್ಭ್ರಮೆಗೊಂಡಿದ್ದಾರೆ. ಹೈದರಾಬಾದ್‌ನ ಪ್ರಮುಖ ವಾಣಿಜ್ಯ ಮತ್ತು ವಸತಿ ಸಂಕೀರ್ಣದಲ್ಲಿರುವ ತಹಶೀಲ್ದಾರ್ ಅವರ ಮನೆಯಲ್ಲಿ ಎಸಿಬಿ ದಾಳಿ ನಡೆಸಿತ್ತು. ಶುಕ್ರವಾರ ರಾತ್ರಿ ಪ್ರಾರಂಭವಾದ ಕಾರ್ಯಾಚರಣೆ ಶನಿವಾರವೂ ಮುಂದುವರೆದಿತ್ತು ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಎಸಿಬಿ ಇಬ್ಬರು ಮಹಿಳಾ ತಹಸೀಲ್ದಾರರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 93 ಲಕ್ಷ ರೂ. ಮತ್ತು 30 ಲಕ್ಷ ರೂ. ಲಂಚ ಪಡೆಯುವಾಗ ಹಿಡಿದಿದ್ದರು ಎನ್ನಲಾಗಿದೆ.
Creadit goes to ANI