*ಮತ್ತೆ ಎದುರಾದ ಬರ.! ಗೋಶಾಲೆ ಪ್ರಾರಂಭಿಸಿ, ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಟ್ಯಾಂಕರ್ ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿರೂರ ಗ್ರಾಮ ಪಂಚ...
*ಮತ್ತೆ ಎದುರಾದ ಬರ.! ಗೋಶಾಲೆ ಪ್ರಾರಂಭಿಸಿ, ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಟ್ಯಾಂಕರ್ ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿರೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳು ಹಜಾರೆ ಒತ್ತಾಯ.!*
*ಬರ ಎದುರಾದ ಕಾರಣ ರೈತರ ಸಾಲ ಮನ್ನಾ ಮಾಡಿ, ಗಡಿಭಾಗದ ಗ್ರಾಮಗಳನ್ನು ಬರಗಾಲ ಘೋಷಿಸುವಂತೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘುನಾಥ್ ಹಜಾರೆ ಆಗ್ರಹ..*
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಜನರು ಹನಿ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದ್ದು, ಇತ್ತ ಜಾನುವಾರುಗಳಿಗೂ ಮೇವಿಲ್ಲದೇ ಬರಗಾಲ ಎದುರಾಗಿದೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಶಿರೂರ್ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳು ಹಜಾರೆ..., ಸೂಕ್ತ ಮಳೆಯಾಗದ ಕಾರಣ ಬಾವಿ,ಕೆರೆಗಳು ಬತ್ತಿಹೋಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.
ಜನರಿಗೆ ಕುಡಿಯುವ ನೀರು ಪೂರೈಸುವಂತೆ ಮನವಿ ಮಾಡಿಕೊಂಡಿದ್ದು, ಸಂಬರಗಿ,ಶಿರೂರ,ಖಿಳೆಗಾಂವ್,ಆಜೂರ್,ಅನಂತಪೂರ್ ಸೇರಿದಂತೆ ಗ್ರಾಮಗಳಲ್ಲಿ ಜಾನುವಾರುಗಳಿಗೆ ಅತಿಯಾದ ಮೇವಿನ ಕೊರತೆ ಉಂಟಾಗಿದೆ ಸರ್ಕಾರ ಮೂಕ ಪ್ರಾಣಿಗಳ ರೋಧನೆ ಅರಿತು ಗೋಶಾಲೆ ಪ್ರಾರಂಭ ಮಾಡಿ,ಹಿಡಿ ಮೇವಿಗಾ ಜನರು ಗುಳೆ ಹೋಗುವುದನ್ನು ತಪ್ಪಿಸಬೆಕಾಗಿದೆ ಎಂದು ಸರ್ಕಾರಕ್ಕೆ ಮನವಿಯನ್ನ ಮಾಡಿಕೊಂಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಘುನಾಥ್ ಹಜಾರೆ, ಉತ್ತರ,ಹಾಗೂ ಪೂರ್ವ ಭಾಗ ಸತತ ಬರಗಾಲದಿಂದ ತತ್ತರಿಸಿದ್ದು, ಜನರಿಗೆ ಕುಡಿಯುವ ನೀರು ಇಲ್ಲದೆ,ಇತ್ತ ದನಕರುಗಳಿಗೆ ಮೇವು ಇಲ್ಲದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಗಡಿ ಗ್ರಾಮಗಳನ್ನು ಬರಗಾಲ ಗೋಷಣೆ ಮಾಡಿ,ರೈತರ ಸಾಲವನ್ನು ಮನ್ನ ಮಾಡಬೇಕಾಗಿದೆ ಎಂದರು.