ಶಿಡ್ಲಘಟ್ಟ: ರಾಜ್ಯ ಸರ್ಕಾರದ ಆದೇಶದ ಅನ್ವಯ ಪಿ.ಎಚ್. ಎಚ್(ಬಿ.ಪಿ.ಎಲ್) ಮತ್ತು ಎ.ಎ.ವೈ (ಅಂತ್ಯೋದಯ) ಪಡಿತರ ಚೀಟಿಗೆ ವಿತರಿಸಲಾಗುವ 05ಕೆಜಿ ಆಹಾರ ಧಾನ್ಯದೊ...
ಶಿಡ್ಲಘಟ್ಟ: ರಾಜ್ಯ ಸರ್ಕಾರದ
ಆದೇಶದ ಅನ್ವಯ ಪಿ.ಎಚ್.
ಎಚ್(ಬಿ.ಪಿ.ಎಲ್) ಮತ್ತು ಎ.ಎ.ವೈ
(ಅಂತ್ಯೋದಯ) ಪಡಿತರ ಚೀಟಿಗೆ
ವಿತರಿಸಲಾಗುವ 05ಕೆಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ
ವತಿಯಿಂದ ಹೆಚ್ಚವರಿಯಾಗಿ 05ಕೆಜಿ ಸೇರಿಸಿ ಪ್ರತಿ ಫಲಾನುಭವಿಗೆ 10ಕೆಜಿ
ಆಹಾರಧಾನ್ಯ ವಿತರಿಸಲು ಸರ್ಕಾರ ನಿರ್ಧರಿಸಿದೆ ಎಂದು ತಹಶೀಲ್ದಾರ್
ಬಿ.ಎನ್.ಸ್ವಾಮಿ ರವರು ತಿಳಿಸಿದರು.
ಮಾರುಕಟ್ಟೆಯಲ್ಲಿ ಆಹಾರಧಾನ್ಯ ಖರೀದಿಸಲು ಟೆಂಡರ್ ಕರೆಯಲಾಗಿದ್ದು,
ಈ ಟೆಂಡರ್ ಪೂರ್ಣಗೊಂಡು ಆಹಾರಧಾನ್ಯ ಸರಬರಾಜು ಮಾಡುವವರೆಗೂ
ರಾಜ್ಯದಲ್ಲಿ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ ನೀಡುವ 05ಕೆಜಿ
ಆಹಾರ ಧಾನ್ಯದ ಬದಲಾಗಿ 01ಕೆಜಿಗೆ ರೂ.34/-ರಂತೆ ನಗದು ಹಣವನ್ನು
ದಿ:01/07/2023ರಿಂದ ಪಡಿತರ ಚೀಟಿಯಲ್ಲಿನ ಪಡಿತರ ಚೀಟಿಯಲ್ಲಿನ
ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ವರ್ಗಾಯಿಸಲು ಆದೇಶಿಸಲಾಗಿರುತ್ತದೆ.
ಅದರಂತೆ ಹಾಲಿ ಇರುವ ಪಡಿತರ ಚೀಟಿಗಳಲ್ಲಿ ಕೆಲವರು ಬ್ಯಾಂಕ್
ಖಾತೆಯನ್ನು ಹೊಂದಿಲ್ಲದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್
ಆಗದೇ ಇರುವುದು, ಆಧಾರ್ ಸಂಖ್ಯೆ ತಪ್ಪಾಗಿ ಲಿಂಕ್ ಆಗಿರುವಂತಹ,
ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರ ನಮೂದು ಇಲ್ಲದಿರುವುದು
ಹಾಗೂ ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿರುವುದು
ಈ ಎಲ್ಲಾ ಕಾರಣಗಳಿಂದ ಅನ್ನಭಾಗ್ಯ ಯೋಜನೆಯ ಹಣವನ್ನು ಪಡಿತರ
ಚೀಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲು
ಸಾಧ್ಯವಾಗಿರುವುದಿಲ್ಲ.
ಅಂತಹ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ
ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಲಾಗಿರುತ್ತದೆ. ಹಾಗೂ ಡಿಬಿಟಿ ಮೂಲಕ
ಹಣವನ್ನು ವರ್ಗಾಯಿಸಲು ಸಾಧ್ಯವಾಗದೇ ಇರುವ ಪಡಿತರ ಫಲಾನುಭವಿಗಳು
ಕೂಡಲೇ ಸೂಚಿಸಿರುವ ಕಾರಣಗಳನ್ನು ಸರಿಪಡಿಸಿ ಯಾವುದಾದರೂ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಆಧಾರ್ ಆಧಾರಿತ ಖಾತೆಯನ್ನು ತೆರೆದು
ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಿ ಪಡಿತರ ಚೀಟಿಗೆ
ಆಧಾರ್ ಇ-ಕೆವೈಸಿ ಮಾಡಿಸಬೇಕು.
ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಲು ಜುಲೈ 2023
ಅಂತಿಮವಾಗಿರುತ್ತದೆ ಒಂದು ವೇಳೆ ಇ-ಕೆವೈಸಿ ಆಗದಿದ್ದಲ್ಲಿ ಆಗಸ್ಟ್
2023 ರಿಂದ ಆಹಾರಧಾನ್ಯ ಮತ್ತು ನಗದು ವರ್ಗಾವಣೆ ತಾತ್ಕಾಲಿಕವಾಗಿ
ಸ್ಥಗಿತಗೊಳ್ಳುವುದು, ಪಡಿತರ ಕುಟುಂಬಗಳಿಗೆ ನೀಡಲಾಗುವ ನಗದು
ವರ್ಗಾವಣೆ ಸೌಲಭ್ಯವನ್ನು ಎನ್.ಐ.ಸಿ. ಸಂಸ್ಥೆ ಹಾಗೂ ಜಿಲ್ಲೆಗಳ ಹಂತದಲ್ಲಿ
ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಅದೇಶದಂತೆ ನ್ಯಾಯಬೆಲೆ
ಅಂಗಡಿಯವರಿಂದ ಹಣ ಖಾತೆಗೆ ಜಮಾ ಆಗುವುದಿಲ್ಲ ಎಂದು ತಹಶೀಲ್ದಾರ್
ಬಿ.ಎನ್ ಸ್ವಾಮಿ ರವರು ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದರು.