ಕಲಬುರಗಿ: ಮೇಲಧಿಕಾರಿಗಳ ಕಿರುಕುಳ-ಆತ್ಮಹತ್ಯೆ ಯತ್ನಿಸಿದ ಸಂಚಾರಿ ಪೊಲೀಸ್ ಪೇದೆ ಕಲಬುರಗಿ: ಮೇಲಧಿಕಾರಿಗಳ ಕಿರುಕುಳ ತಾಳಲಾರದೆ ಮನನೊಂದು ಸಂಚಾರಿ ಪೊಲೀಸ್ ಕ...
ಕಲಬುರಗಿ: ಮೇಲಧಿಕಾರಿಗಳ
ಕಿರುಕುಳ-ಆತ್ಮಹತ್ಯೆ ಯತ್ನಿಸಿದ ಸಂಚಾರಿ
ಪೊಲೀಸ್ ಪೇದೆ
ಕಲಬುರಗಿ: ಮೇಲಧಿಕಾರಿಗಳ ಕಿರುಕುಳ ತಾಳಲಾರದೆ ಮನನೊಂದು ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಲಬುರಗಿ ನಗರದಲ್ಲಿ ಈ ಘಟನೆ ನಡೆದಿದೆ. ನಗರದ ಸಂಚಾರಿ ಪೋಲಿಸ್ ಠಾಣೆ-1 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಎನ್ನುವ ಪೋಲಿಸ್ ಸಿಬ್ಬಂದಿಯೇ ಆತ್ಮಹತ್ಯೆಗೆ ಯತ್ನಿಸಿದ್ದು ಎಂದು ತಿಳಿದು ಬಂದಿದೆ.
ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನ್ನ ಮೇಲಧಿಕಾರಿಗಳು ಪ್ರತಿನಿತ್ಯವೂ ಹಸ್ತಾ ಹಣ ತಂದು ಕೊಡುವಂತೆ ಕಿರುಕುಳ ನೀಡಲಾಗುತ್ತಿದ್ದಾರೆ. ಹಫ್ತಾ ತಂದು ಕೊಡದೇ ಇದ್ದರೆ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಅಕ್ರಮ ಮರಳು ಮಾಫಿಯಾ ಹೀಗೆ ಹಲವರ ಹತ್ತಿರ ಹಣ ತಂದು ನೀಡಬೇಕು. 10-15
ವರ್ಷಗಳಿಂದ ಒಂದೇ ಜಾಗದಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳು ಪೋಲಿಸರಿಗೆ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿರುವ
ಪೊಲೀಸ್ ಕಾನ್ಸ್‌ಟೇಬಲ್‌ನ ಸಹದ್ಯೋಗಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ತಡೆಯದೇ ಹೋದರೆ ಮೇಲಧಿಕಾರಿಗಳ ಆಟಕ್ಕೆ ಕೆಳ ಹಂತದ ಪೊಲೀಸ್ ಸಿಬ್ಬಂದಿ ಬಲಿಯಾಗುವುದು ಖಂಡಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ
ಮಾಡಿ ಕಾನ್ಸ್‌ಟೇಬಲ್‌ಗಳ ಜೀವ ಉಳಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.