ನೆರವಿಗೆ ಉಚಿತ ಸಹಾಯವಾಣಿ.. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿಗೆ ಸಲಹೆಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉಚಿತ ಸಹಾಯವಾಣಿ ಆರಂ...
ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿಗೆ ಸಲಹೆಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉಚಿತ ಸಹಾಯವಾಣಿ ಆರಂಭಿಸಿದೆ. ದೂರವಾಣಿ ಸಂಖ್ಯೆ 1902ಕ್ಕೆ ಕರೆಮಾಡಿ ನೆರವು ಪಡೆಯಬಹುದು.
ಆಯಾ ತಾಲ್ಲೂಕಿನಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವ ಅಹವಾಲು ಪರಿಶೀಲಿಸಿ ಪರಿಹಾರ ಸೂಚಿಸುವ ಹೊಣೆ ಯನ್ನು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಲಾಗಿದೆ.
ಇಲಾಖೆಯ ಜಿಲ್ಲಾ ಉಪ ನಿರ್ದೇ ಶಕರು ಜಿಲ್ಲಾ
ಮಟ್ಟದ ಅಪೀಲು ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರು: ಗೃಹಲಕ್ಷ್ಮಿಯೋಜನೆಯಡಿ
ಆಗಸ್ಟ್ 16ರಿಂದ ಪ್ರತಿ ಕುಟುಂಬದ
ಯಜಮಾನಿಯ ಖಾತೆಗೆ ತಿಂಗಳಿಗೆ
2,000 ಜಮಾ ಮಾಡಲಾಗುವುದು
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಕಟಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ನೋಂದಣಿಗೆಗಳ ಚಾಲನೆ ನೀಡಿ
ಮಾತನಾಡಿದ ಅವರು, ನರವು ವಿತರಣೆಯ ಆರಂಭದ ದಿನಾಂಕವನ್ನು ಘೋಷಿಸಿದರು.
'ಚುನಾವಣೆಗೂ ಮುನ್ನ ನಾವು ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ.
ಯೋಜನೆಗಳ ಈ ಅನುಷ್ಠಾನದಿಂದ ರಾಜ್ಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಮಾತುಗಳನ್ನು ಕೆಲವರು
ಆಡುತ್ತಿದ್ದಾರೆ. ಅಂತಹ ಮಾತುಗಳಿಗೆ ಯಾವ ಬೆಲೆಯೂ ಇಲ್ಲ' ಎಂದರು.
ಅಂಕಿ-ಅಂಶಗಳು ..
ಒಟ್ಟು ಫಲಾನುಭವಿಗಳು 1.28 ಕೋಟಿ
ತಿಂಗಳಿಗೆ ತಲಾ €2,000
ಪ್ರತಿಫಲಾನುಭವಿಗೆ ವರ್ಷಕ್ಕೆ *24,000
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮಾತನಾಡಿ, 'ಗೃಹಲಕ್ಷ್ಮಿ ಯೋಜನೆಯು
ರಾಜ್ಯದ ಕೋಟ್ಯಂತರ ಕುಟುಂಬಗಳಲ್ಲಿ
ಬೆಳಕು ತರಲಿದೆ. ಮಹಿಳೆಯರ ಕೈಗೆ ಸಿಗುವ ಹಣ ಆರ್ಥಿಕತೆಯಲ್ಲಿ ಚಲನಶೀಲತೆಗೆ ನೆರವಾಗಲಿದೆ' ಎಂದು ಹೇಳಿದರು.