ನೆಲಮಂಗಲ: ವ್ಯಾಪಾರಿಯೊಬ್ಬರು ನೂತನವಾಗಿ ಪ್ರಾರಂಭಿಸುತ್ತಿದ್ದಂತ ಕಂಪನಿಯ ಟ್ರೇಡ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಲೈಸೆನ್ಸ್ ನೀಡುವುದಕ್ಕೆ 1 ಲ...
ನೆಲಮಂಗಲ: ವ್ಯಾಪಾರಿಯೊಬ್ಬರು ನೂತನವಾಗಿ ಪ್ರಾರಂಭಿಸುತ್ತಿದ್ದಂತ ಕಂಪನಿಯ ಟ್ರೇಡ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಲೈಸೆನ್ಸ್ ನೀಡುವುದಕ್ಕೆ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನಲ್ಲಿ 43 ಸಾವಿರ ಪಡೆಯುತ್ತಿದ್ದಾಗ ಆಹಾರ ನಿರೀಕ್ಷಕನನ್ನು ( Food Inspector ) ಲೋಕಾಯುಕ್ತ ಪೊಲೀಸರು ( Lokayukta Police ) ಬಂಧಿಸಿರುವ ಘಟನೆ, ನೆಲಮಂಗಲದ ಸೊಂಡೆಕೊಪ್ಪ ಸರ್ಕಲ್ ಬಳಿಯ್ಲಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಆಹಾರ ನಿರೀಕ್ಷಕ ಮಹಾಂತೇಗೌಡ ಎಂಬುವರು ರಂಗದಾಮಯ್ಯ ಎಂಬುವರಿಗೆ ಟ್ರೇಡ್ ಲೈಸೆನ್ಸ್ ನೀಡುವುದಕ್ಕಾಗಿ 1 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರಂಗದಾಮಯ್ಯ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಇಂದು ಲಂಚದ ಹಣದಲ್ಲಿ ಮುಂಗಡವಾಗಿ 43 ಸಾವಿರ ನೀಡುವಂತೆ ತಿಳಿಸಿದ ಕಾರಣ, ಆಹಾರ ನಿರೀಕ್ಷಕ ಮಹಾಂತೇಗೌಡಗೆ ನೀಡುವುದಕ್ಕೆ ರಂಗದಾಮಯ್ಯ ತೆರಳಿದ್ದರು. ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸುತ್ತಿದ್ದರೇ, ಮಹಾಂತೇಗೌಡ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಲೋಕಾಯುಕ್ತ ಪೊಲೀಸರು ಸುಮಾರು 15 ಕಿಲೋಮೀಟರ್ ಚೇಸ್ ಮಾಡಿ, ಟ್ರೇಡ್ ಲೈಸೆನ್ಸ್ ನೀಡಲು ರಂಗದಾಮಯ್ಯ ಅವರಿಂದ ಲಂಚದ ಹಣವನ್ನು ಪಡೆದಂತ ಆಹಾರ ನಿರೀಕ್ಷಕ ಮಹಾಂತೇಗೌಡನನ್ನು ಬಂಧಿಸಿದ್ದಾರೆ. ಈ ಸಂಬಂಧ ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.